ಅಗ್ಗದ ದರದಲ್ಲಿ ಸಿಗಲಿದೆ ಮೆಡಿಸನ್ : ಇದು ಕೇಂದ್ರ ಸರ್ಕಾರದ ನ್ಯೂ ಪ್ಲ್ಯಾನ್...!

04 Jan 2019 5:30 PM | General
336 Report

ಕೇಂದ್ರ ಸರಕಾರ  ಜನ ಸಾಮನ್ಯರಿಗೆ ಸಹಾಯವಾಗುವ ನಿಟ್ಟಿನಲ್ಲಿಯೇ ಯೋಜನೆಯೊಂದನ್ನು ಜಾರಿಗೊಳಿಸಿದೆ. ಇದರಿಂದಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕೋಟ್ಯಾಂತರ ರೋಗಿಗಳಿಗೆ 11,000 ಕೋಟಿ ರೂ. ಲಾಭವಾಗಿದೆ. ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಇಂದಿನ ಕಾಲದಲ್ಲಿ ಬಹಳ ದುಬಾರಿ ವಿಚಾರ. ಇದನ್ನು ಮನಗಂಡ ಕೇಂದ್ರ ಸರ್ಕಾರ ಔಷಧಗಳ ಬೆಲೆ ಜನರ ಕೈಗೆಟಕುವಂತೆ ಮಾಡುತ್ತಿದೆ. ಸರಕಾರ 855 ಮುಖ್ಯ ಔಷಧಿಗಳ ಮತ್ತು ಕೆಲವು ಅತ್ಯಗತ್ಯ ವೈದ್ಯಕೀಯ ಉಪಕರಣಗಳ ಬೆಲೆಯನ್ನು ನಿಗದಿಸಿರುವುದರಿಂದ ಜನರಿಗೆ ಇಷ್ಟೊಂದು ದೊಡ್ಡ ಮೊತ್ತದ ಲಾಭವಾಗುವುದು ಸಾಧ್ಯವಾಗಿದೆ.

ಈ ವಿಷಯವನ್ನು ಇಂದು ಕೇಂದ್ರದ ಸಹಾಯಕ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್‌ ಸುಖ್‌ ಎಲ್‌ ಮಾಂಡವೀಯ ರಾಜ್ಯಸಭೆಗೆ ತಿಳಿಸಿದರು. ಜನರಿಗೆ ಅತೀ ಅಗತ್ಯವಿರುವ ಮಹತ್ವದ ಔಷಧಿಗಳ ಬೆಲೆಯನ್ನು ಸರಕಾರ ಅಧಿಸೂಚನೆ ಹೊರಡಿಸುವ ಮೂಲಕ ನಿಗದಿಸಿದ ಪರಿಣಾಮವಾಗಿ ಜನರಿಗೆ ಕಡಿಮೆ ದರದಲ್ಲಿ ಔಷಧಗಳು ದೊರಕುತ್ತವೆ ಎಂದವರು ಹೇಳಿದರು.ತೀರಾ ಬಡತನದಲ್ಲಿರುವ ಕೆಲ ರೋಗಿಗಳು ಸದ್ಯ ಔಷಧಿಗಳನ್ನು ಕೊಂಡುಕೊಳ್ಳಲು ದುಬಾರಿ ವೆಚ್ಚ ತೆರಬೇಕಿಲ್ಲ.  ಕಡಿಮೆ ದರದಲ್ಲಿ, ಸರ್ಕಾರವೇ ನಿಗಧಿ ಪಡಿಸಿದ ಬೆಲೆಯಲ್ಲಿ ಚಿಕಿತ್ಸೆ ಹಾಗೂ ಔಷಧಿಗಳನ್ನು  ಪಡೆದುಕೊಳ್ಳಬಹುದು. ಇದರ ನಡುವೆ ಕೆಲ ಔಷಧಿ ಕಂಪನಿಗಳು ತಾವೇ ರೂಪಿಸಿಕೊಳ್ಳುತ್ತಿದ್ದ ಬೆಲೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದಂತಿದೆ.

Edited By

Kavya shree

Reported By

Kavya shree

Comments