ರಾಮ ಮಂದಿರ ವಿವಾದ ಬಗೆಹರಿದ ದಿನವೇ ನಾನು ಇಟ್ಟಿಗೆ ಹೊರುತ್ತೇನೆ : ಫಾರುಕ್ ಅಬ್ದುಲ್ಲಾ

04 Jan 2019 3:10 PM | General
463 Report

ಅಯೋದ್ಯ ವಿವಾದ ನಿನ್ನೆ ಮೊನ್ನೆದಲ್ಲ. ಇದೀಗ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಅವರು ರಾಮ ಹಿಂದೂಗಳಿಗೆ ಮಾತ್ರ ಸೇರಿದವನಲ್ಲ, ಇಡೀ ಜಗತ್ತಿಗೆ ಸೇರಿದವನು ಎಂಬ ಹೇಳಿಕೆ ನೀಡಿದ್ದಾರೆ. ಅಯೋದ್ಯ ವಿವಾದವನ್ನು  ಮಾತು-ಕತೆ ಮೂಲಕ ಬಗೆಹರಿಸಿಕೊಳ್ಳಬೇಕೆ ವಿನಹ ಬೇರೆ ದಾರಿಯನ್ನು ಹಿಡಿಯಬಾರದೆಂದು ಫಾರುಕ್ ಅಬ್ದುಲ್ಲಾ ಹೇಳಿದ್ದಾರೆ.ಅಯೋಧ್ಯೆಯಲ್ಲಿನ ಭೂ ಒಡೆತನ ಯಾರಿಗೆ ಸೇರಿದ್ದು ಎಂಬ ಪ್ರಕರಣದ ವಿಚಾರಣೆ ದಿನಾಂಕ ಮುಂದಕ್ಕೆ ಹಾಕಲಾಗಿದೆ. ಸೂಕ್ತ ಪೀಠವು ಇದೇ ಜನವರಿ 10ರಂದು ಪ್ರಕಟಿಸಿ ಆದೇಶ ಹೊರಡಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದ ಬೆನ್ನಲ್ಲೇ ಅಬ್ದುಲ್ಲಾ ಅವರು ಈ ಹೇಳಿಕೆ ನೀಡಿದ್ದಾರೆ.

ಕೋರ್ಟ್ ತನಕ ವಿವಾದವನ್ನು ಎಳೆದೊಯ್ಯಬಾರದು, ಅದೇನಿದ್ದರು ಜನರ ಮಧ್ಯೆಯೇ ತೀರ್ಮಾನವಾಗಬೇಕು. ರಾಮ ಹಿಂದೂಗಳಿಗೆ ಮಾತ್ರ ದೇವನಲ್ಲ , ಇಡೀ ಜಗತ್ತಿಗೆ ಬೇಕಾದವನು ಎಂದಿದ್ದಾರೆ.ಈ ವಿಚಾರವನ್ನು ಜನರು ಮೇಜಿನ ಚರ್ಚೆ ಮಾಡುವ ಮೂಲಕ ಬಗೆಹರಿಸಬೇಕಾಗಿದೆ ಎಂದು ಅಬ್ದುಲ್ಲಾ  ಹೇಳಿದ್ದಾರೆ. ಯಾಕೆ ಈ ವಿಚಾರವನ್ನು ಕೋರ್ಟ್‌ಗೆ ಎಳೆದೊಯ್ಯುವುದು? ಈ ವಿಚಾರ ಮಾತುಕತೆಯ ಮೂಲಕ ಬಗೆ ಹರಿಯುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದರು.ಯಾರೂ ಕೂಡ ರಾಮನ ವಿರುದ್ಧ ಇಲ್ಲ.ಆದರೆ ಅಯೋಧ್ಯೆ ವಿಚಾರ ಶೀಘ್ರದಲ್ಲಿ ಬಗೆ ಹರಿಯಬೇಕಾಗಿದೆ.ಯಾವ ದಿನ ಈ ವಿಚಾರ ಬಗೆಹರಿಯುತ್ತದೋ ಆದಿನ ನಾನು ಮಂದಿರಕ್ಕಾಗಿ ಇಟ್ಟಿಗೆ ಹಾಕಲು ತೆರಳುತ್ತೇನೆ ಎಂದರು.ನವೆಂಬರ್‌ನಲ್ಲಿ ಫಾರೂಕ್‌ ಅಬ್ದುಲ್ಲಾ ಅವರು ರಾಮ ಜಗತ್ತಿಗೇ ಸೇರಿದವನು. ಅಯೋಧ್ಯೆಯಲ್ಲೇ ಯಾಕೆ ಮಂದಿರ ನಿರ್ಮಾಣ ಮಾಡಬೇಕು ಎಂದು ಪ್ರಶ್ನಿಸಿದ್ದರು. ಈಗ ರಾಮಂದಿರ ನಿರ್ಮಾಣ ವಿವಾದಲ್ಲಿ ಅಬ್ದುಲ್ಲಾ ಈ ರೀತಿ ಪ್ರತಿಕ್ರಿಯಿಸಿರುವುದಕ್ಕೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಅಯೋಧ್ಯೆಯಲ್ಲಿ ರಾಮ ನಿರ್ಮಾಣ ಮಾಡಬೇಕು ಎಂಬುದು ಹಿಂದೂಗಳ ಒತ್ತಡ.

Edited By

Kavya shree

Reported By

Kavya shree

Comments