'ಅಂದು ಮಧ್ಯರಾತ್ರಿ ಹೊರಟಾಗ... ': ಅಯ್ಯಪ್ಪನ ದರ್ಶನ ಪಡೆದ ಬಿಂದು ಹೇಳಿದ ಕಥೆ...!!!

03 Jan 2019 10:21 AM | General
624 Report

ಶತ-ಶತಮಾನಗಳಿಂದ ಸ್ತ್ರೀಯರು ಪ್ರವೇಶ ಮಾಡದ ಶಬರಿಮಲೆಗೆ  ಮಹಿಳೆಯಿರಿಬ್ಬರು ನಿನ್ನೆ ದೇಗುಲ ಪ್ರವೇಶ ಮಾಡಿ ಇತಿಹಾಸ ದಾಖಲೆ ಬರೆದಿದ್ದಾರೆ. ಸುಮಾರು 800 ವರ್ಷಗಳ ಸಂಪ್ರದಾಯವನ್ನು ಮುರಿದು  ಪೊಲೀಸ್ ಬಿಗಿ ಭದ್ರತೆಯಲ್ಲಿ 50 ವರ್ಷದ ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿ ಅಯ್ಯಪ್ಪನ  ದರ್ಶನ ಪಡೆದಿದ್ದಾರೆ. ಅಂದಹಾಗೇ ಶಬರಿ  ಮಲೆಯ ಸಂಪ್ರದಾಯ ಮುರಿದು ಬಿಂದು ಮತ್ತು ಕನಕದುರ್ಗ ಎಂಬುವವರು ದೇವಾಲಯ ಪ್ರವೇಶ ಮಾಡಿದ್ದು ರೋಚಕವೇ ಸರಿ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಈ ಮಹಿಳೆಯರ ಪ್ರವೇಶದಿಂದ ಕೇರಳದಲ್ಲಿ ಮಾಲಾಧಾರಿಗಳ ನಡುವೆ ಜಗಳ ಆರಂಭವಾಗಿದೆ. ರಾಜ್ಯವೇ ಹೊತ್ತಿ ಉರಿಯುತ್ತಿದೆ. ಈ ಮಧ್ಯೆ ತಾವು ದೇವಸ್ಥಾನ  ಪ್ರವೇಶ ಮಾಡಿದ್ದರ ಬಗ್ಗೆ ಆ ಇಬ್ಬರು ಮಹಿಳೆಯರು ಹೇಳೋದೇನು ಗೊತ್ತಾ…?

ಅಯ್ಯಪ್ಪನ ದೇಗುಲ ಪ್ರವೇಶ ಮಾಡಿದವರು 42 ವರ್ಷದ ಬಿಂದು ಮತ್ತು 44 ವರ್ಷ ಕನಕದುರ್ಗಾ. ಬಿಂದು ಹೇಳುವ ಪ್ರಕಾರ ದೇವಸ್ಥಾನ ಪ್ರವೇಶ ಮಾಡುವುದಕ್ಕೆ ಮೊದಲೇ ಪ್ರೀ ಪ್ಲ್ಯಾನ್ ಮಾಡಲಾಗಿತ್ತು.   ಮೊದಲಿಗೆ ಅವರು [ಮಹಿಳೆಯರು] ಶಬರಿಮಲೆಯ ಪಂಪಾಗೆ ತಲುಪಿದ್ದರಂತೆ.ಆ ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿ ಸೆಕ್ಯುರಿಟಿ ಕೋರಿದ್ದಾರೆ. ಮಂಗಳವಾರ ತಾವು ದೇವಸ್ಥಾನ ತಲುಪುತ್ತಿದ್ದೇವೆ ನೀವು ಸಹಾಯಮಾಡಿ ಎಂದಿದ್ದಾರೆ. ಇವರ ಮನವಿಗೆ ಪೊಲೀಸರು ಕೂಡ ಒಪ್ಪಿದ್ದಾರೆ.ಇವರ ಮನವಿಗೆ ಒಪ್ಪಿದ ಪೊಲೀಸರು ಆ ಇಬ್ಬರನ್ನೂ ಇಡೀ ದಿನ ಪಂಪಾದಲ್ಲೇ ಗೌಪ್ಯ ಸ್ಥಳದಲ್ಲೇ ಉಳಿಯುವಂತೆ ಸೂಚಿಸಿದ್ದಾರೆ. ಮರುದಿನ ಅಂದ್ರೆ ಬುಧವಾರ ಮಧ್ಯರಾತ್ರಿ 1.30 ಸುಮಾರಿಗೆ ಶಬರಿಮಲೆಗೆ ಪ್ರಯಾಣ ಆರಂಭಿಸಿದ್ದಾರೆ.

ಬಳಿಕ ಬೆಳಗಿನ ಜಾವ 3.30ರ ಸುಮಾರಿಗೆ ಇಬ್ಬರು ಮಹಿಳೆಯರ ಕಪ್ಪು ಬಟ್ಟೆ ಧರಿಸಿ ಪುರುಷ ಭಕ್ತಾದಿಗಳ ಜೊತೆಗೆ ಶಬರಿಮಲೆ ಬೆಟ್ಟ ಹತ್ತಿದ್ದಾರೆ. ಮಹಿಳೆಯರ ಜೊತೆಯಲ್ಲೇ ಇದ್ದ ಪೊಲೀಸರು ಅವ್ರಿಗೆ ಸೂಕ್ತ ರಕ್ಷಣೆ ಮೂಲಕ ದೇಗುಲ ಪ್ರವೇಶ ಮಾಡಿಸಿದ್ದಾರೆ. ಆದ್ರೆ, ಇವ್ರು ಕಪ್ಪು ಬಟ್ಟೆ ಧರಿಸಿದ್ದರಿಂದ ಮತ್ತು ಬೆಳಗಿನ ಜಾವವಾಗಿದ್ದರಿಂದ ಆ ಹೊತ್ತಲ್ಲಿ ಯಾವುದೇ ಪ್ರತಿಭಟನೆ ಇಲ್ಲದ್ರಿಂದ ನಾವು ದೇಗುಲ ಪ್ರವೇಶ ಮಾಡೋದಕ್ಕೆ ಸಾಧ್ಯವಾಯ್ತು ಅಂತಾ ತಿಳಿಸಿದ್ದಾಳೆ. ಇಷ್ಟಾದ್ರೂ ಕೂಡಾ ನಮಗೆ ಪ್ರಸಿದ್ಧ ಇರುಮುಡಿಕಟ್ಟು ಮತ್ತು ಅಯ್ಯಪ್ಪನ ಪವಿತ್ರ 18 ಮೆಟ್ಟಿಲುಗಳನ್ನ ಹತ್ತಲು ಸಾಧ್ಯವಾಗಲಿಲ್ಲ ಅಂತಾನೂ ತಿಳಿಸಿದ್ದಾರೆ. ಜೊತೆಗೆ ತಾವು ದೇಗುಲ ಪ್ರವೇಶ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ.  ಒಟ್ಟಾರೆ  ನಾವು ದೇವರ ದರ್ಶನ ಮಾಡಿದ್ದಕ್ಕೆ ಖುಷಿಯಿದೆ. ಹಿಂದಿನ ಸಂಪ್ರದಾಯ ಮುರಿದು ಸ್ತ್ರೀಯರಿಗೂ ಸಮಾನತೆ ಬೇಕು ಎಂದು  ಹೋರಾಡಿದ್ದಕ್ಕೆ ನಿಜ ಖುಷಿಯಾಗುತ್ತಿದೆ. ನಾವು ಕೂಡ ಇನ್ನುಮುಂದೆ ಶಬರಿ ಮಲೆಗೆ ಹೋಗಲು  ಅವಕಾಶ ದೊರೆತಿದ್ದು ಸಮಾನತೆಯ ಹೋರಾಟವೆಂದು ಬಿಂದು ತಮ್ಮ ಮಾತುಗಳಲ್ಲೇ ಪ್ರಸ್ತಾಪಿಸಿದ್ದಾರೆ.

Edited By

Kavya shree

Reported By

Kavya shree

Comments