ದಾಖಲೆ ಮುರಿದ ಸ್ತ್ರೀಯರು : ಕೊನೆಗೂ ಅಯ್ಯಪ್ಪನ ಪಾದ ಮುಟ್ಟಿದ ಈ ಮಹಿಳೆಯರು!!!

02 Jan 2019 1:14 PM | General
155 Report

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇಬ್ಬರು ಮಹಿಳೆಯರು ಬುಧವಾರ ನಸುಕಿನ ವೇಳೆ ಶಬರಿ ಮಲೆ ದೇವಾಯಲದೊಳಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.  50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ಬುಧವಾರ ದೇವಾಲಯದೊಳಗೆ ಕಾಲಿಟ್ಟಿದ್ದಾರೆ. ಶತ ಶತಮಾನಗಳಿಂದ ಸ್ತ್ರೀಯರು ಪ್ರವೇಶ ಮಾಡದ ದೇವಾಲಯಕ್ಕೆ ಕೊನೆಗೂ ಪ್ರವೇಶ ಮಾಡಿದ್ದಾರೆ.  ಋತುಮತಿಯಾಗುವ ಮಹಿಳೆಯರಿಗೆ ಹಿಂದಿನಿಂದಲೂ ಶಬರಿಮಲೆಗೆ ಹೋಗುವ ಅವಕಾಶವಿರಲಿಲ್ಲ. ಶತಮಾನಗಳ ಕಟ್ಟಳೆಗಳನ್ನು ಮುರಿದ ಕೋರ್ಟು ಎಲ್ಲಾವಯಸ್ಸಿನ ಮಹಿಳೆಯರಿಗೂ ಅವಕಾಶ ಕಲ್ಪಿಸಿಕೊಡಲು ನಿರ್ಧಾರ  ಮಾಡಿತು.

ಇಬ್ಬರೂ ಮಹಿಳೆಯರು ಸುಮಾರು 40 ವರ್ಷ ವಯಸ್ಸಿನವರಾಗಿದ್ದು, ಮುಂಜಾವ ದೇಗುಲ ಪ್ರವೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಸ್ತ್ರೀಯರಿಗೆ  ಶಬರಿ ಮಲೆಗೆ ಅವಕಾಶ ಎಂದಾಗ ಭಾರೀ ವಿರೋಧ ವ್ಯಕ್ತವಾಯ್ತು. ಈ ನಡುವೆ ಒಂದಷ್ಟು ಮಹಿಳೆಯರು ಪೊಲೀಸರ ಭದ್ರತೆಯಲ್ಲಿ ಹೋದರೂ ಗರ್ಭಗುಡಿಗೆ ಪ್ರವೇಶಿಸಿಲಾಗದೇ ಹಿಂದುರಿಗಿದರು.ಸೋಮವಾರ ಮಧ್ಯರಾತ್ರಿ ಶಬರಿಮಲೆ ಏರಲು ಆರಂಭಿಸಿದ್ದ ಭಕ್ತೆಯರು ನಸುಕಿನ ಜಾವ 3.45ಕ್ಕೆ ದೇಗುಲ ತಲುಪಿದ್ದು, ಅಯ್ಯಪ್ಪನಿಗೆ ಪ್ರಾರ್ಥನೆ ಸಲ್ಲಿಸಿ ವಾಪಸಾಗಿದ್ದಾರೆ ಎನ್ನಲಾಗಿದೆ. ಮಫ್ತಿಯಲ್ಲಿದ್ದ ಹಾಗೂ ಸಮವಸ್ತ್ರದಲ್ಲಿದ್ದ ಪೊಲೀಸರ ತಂಡ ಮಹಿಳೆಯರಿಗೆ ಭದ್ರತೆ ಒದಗಿಸಿದೆ.ಈ ಹಿಂದೆ ಡಿಸೆಂಬರ್ ಕೊನೆಯಲ್ಲಿ ಕೆಲ ಮಹಿಳೆಯರು ಶಬರಿಮಲೆಗೆ ಪ್ರವೇಶಿಸಿದಾಗ ಭಾರೀ ವಿರೋಧ ವ್ಯಕ್ತವಾಯ್ತು.  ಆ ಮಹಿಳೆಯರು ಅರ್ಧದಲ್ಲಿಯೇ ವಾಪಸ್ ಆಗಿದ್ದರು. ಆದರೆ ಈ ಬಾರಿ ಸುಮಾರು 40 ವರ್ಷದ ಮಹಿಳೆಯರು  ದೇವಾಯಕ್ಕೆ ಪ್ರವೇಶ ಮಾಡಿಯೇ ಬಿಟ್ಟರು.

Edited By

Manjula M

Reported By

Manjula M

Comments