ಹೊಸ ವರ್ಷದ ದಿನ ಭಾರತದಲ್ಲಿ ಜನಿಸಿದ ಮಕ್ಕಳೆಷ್ಟು ಗೊತ್ತಾ..!!

02 Jan 2019 9:58 AM | General
334 Report

ನೆನ್ನೆ ಅಷ್ಟೆ ಎಲ್ಲರು ಕೂಡ ಹೊಸ ವರ್ಷವನ್ನು ಸಂಭ್ರಮದಿಂದ ಆಚರಣೆ ಮಾಡಿ ಖುಷಿ ಖುಷಿಯಾಗಿದ್ದಾರೆ.. ಈ ವರ್ಷವಾದರೂ ಏನಾದರೂ ಸಾಧನೆ ಮಾಡಬೇಕು ಎಂಬ ಪಣ ತೊಟ್ಟಿರುವವರು ಎಷ್ಟೋ ಜನ.. ನಮ್ಮ ಭಾರತದಲ್ಲಿ ಜನಸಂಖ್ಯೆಯನ್ನು ಕಡಿಮೆ ಇಲ್ಲ ಬಿಡಿ.. ನಮ್ಮ ದೇಶದಲ್ಲಿ ಹೊಸವರ್ಷದ ದಿನದಂದು ಎಷ್ಟು ಮಕ್ಕಳು ಹುಟ್ಟಿದ್ದಾರೆ ಎಂಬುದನ್ನು ಕೇಳುದ್ರೆ ಶಾಕ್ ಆಗ್ತೀರಾ..! 2019ರ ಹೊಸ ವರ್ಷದ ಮೊದಲ ದಿನ ಭಾರತದಲ್ಲಿ 69,944 ಮಕ್ಕಳು ಜನಿಸಿವೆ ಎಂದು ಯುನಿಸೆಫ್‌ ಮಂಗಳವಾರ ತಿಳಿಸಿದೆ...ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ 44,940 ಮಕ್ಕಳು, ನೈಜರಿಯಾದಲ್ಲಿ 25,685 ಜನಿಸಿವೆ.

ಭಾರತದಲ್ಲಿ 69,944 ಸೇರಿದಂತೆ ವಿಶ್ವದಲ್ಲಿ ಒಟ್ಟು 3,95,072 ಮಕ್ಕಳು ಜನಿಸಿವೆ ಎಂಬ ಮಾಹಿತಿಯನ್ನು ನೀಡಿದೆ. ಮಕ್ಕಳ ರಕ್ಷಣೆಯಲ್ಲಿ ಯುನಿಸೆಫ್‌ ಮಹತ್ವದ ಪಾತ್ರ ವಹಿಸುತ್ತಿದ್ದು, ಎಲ್ಲ ಮಕ್ಕಳು ಆರೋಗ್ಯವಂತ ಜೀವನ ನಡೆಸುವಂತಾಗಲು ಹೊಸ ವರ್ಷದಂದು ಎಲ್ಲರೂ ಬದ್ಧತೆ ಪ್ರಕಟಿಸಬೇಕು ಎಂದು ತಿಳಿಸಿದೆ. 2017ರಲ್ಲಿ 10 ಲಕ್ಷ ಮಕ್ಕಳು ಹುಟ್ಟಿದ ದಿನದಂದೇ ಸಾವನ್ನಪ್ಪಿವೆ. 25 ಲಕ್ಷ ಮಕ್ಕಳು ಹುಟ್ಟಿದ ಮೊದಲ ತಿಂಗಳೊಳಗೇ ಅಸುನೀಗಿವೆ ಎಂದು ಯುನಿಸೆಫ್ ಕಳವಳ ವ್ಯಕ್ತಪಡಿಸಿದೆ. ಆದ್ದರಿಂದ ಮಕ್ಕಳನ್ನು ಸರಿಯಾಗಿ ಪಾಲನೆ ಪೋಷಣೆ ಮಾಡಬೇಕು ಎಂದು ಯುನಿಸೆಫ್ ತಿಳಿಸಿದೆ. ಮಕ್ಕಳನ್ನು ಹುಷಾರಾಗಿ ನೋಡಿಕೊಳ್ಳುವುದು ತಾಯಂದಿರ ಕರ್ತವ್ಯ ಎಂದು ತಿಳಿಸಿದೆ.

Edited By

Manjula M

Reported By

Manjula M

Comments