2018 ಕ್ಕೆ ಬಾಯ್ ಹೇಳಿ ..ಹೊಸ ವರ್ಷವನ್ನು ಅದ್ಧೂರಿಯಾಗಿ ವೆಲ್ಕಮ್ ಮಾಡಿದ ಸಿಲಿಕಾನ್ ಸಿಟಿ

01 Jan 2019 11:56 AM | General
206 Report

2018 ಕ್ಕೆ ಬಾಯ್ ಹೇಳಿ 2019 ಕ್ಕೆ ಹಾಯ್ ಹೇಳುವ ಸಂಭ್ರಮದಲ್ಲಿ ಇದ್ದಾರೆ.  ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ವೆಲ್ಕಮ್ ಮಾಡಿಕೊಂಡಿದ್ದಾರೆ…. ಯುವಕ-ಯುವತಿಯರು ರಸ್ತೆಗೆ ಇಳಿದು ನೃತ್ಯ ಮಾಡಿ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಬೆಂಗಳೂರಿನ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ,ಹೋಟೆಲ್, ಕ್ಲಬ್ ಗಳಲ್ಲಿ ಪಾರ್ಟಿಗಳು ಜೋರಾಗಿತ್ತು.

ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿತ್ತು. ನೋಡೋದಕ್ಕೆ ಎರಡು ಕಣ್ಣು ಸಾಲದಾಗಿತ್ತು… ಯಾವುದೆ ರೀತಿಯ  ಕಹಿ ಘಟನೆ ನಡೆಯದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ವ್ಯಾಪಕ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಮಂಗಳವಾರ  ಬೆಳಗ್ಗೆ  6 ಗಂಟೆಯವರೆಗೆ ವಿಮಾನ ನಿಲ್ದಾಣ ರಸ್ತೆ, ತುಮಕೂರು ರೋಡ್ ನ ಪ್ಲೈ ಓವರ್ ಹೊರತುಪಡಿಸಿ ಬೆಂಗಳೂರಿನ ಎಲ್ಲಾ ಫ್ಲೈ ಓವರ್ ಗಳಲ್ಲಿ ಸಂಚಾರವನ್ನು ರದ್ದು  ಮಾಡಲಾಗಿತ್ತು. ಸಾಕಷ್ಟು ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.. ಸಿಲಿಕಾನ್ ಸಿಟಿ ಜನರು ಎಲ್ಲವನ್ನು ಮರೆತು ನವ ವರ್ಷದಲ್ಲಿ ಮೈರೆತು ಹಾಡಿ ಕುಣಿದು ಕುಪ್ಪಳಿಸಿದರು..

Edited By

Manjula M

Reported By

Manjula M

Comments