ವಾಹನ ಸವಾರರೇ ಒಮ್ಮೆ ಗಮನಿಸಿ : ಇಂದಿನಿಂದಲೇ ಜಾರಿಯಾಗಲಿದೆ ಈ ನಿಯಮ..!!

01 Jan 2019 10:38 AM | General
314 Report

ಇತ್ತಿಚಿಗೆ ಹೆಣ್ಣು ಮಕ್ಕಳ ಮೇಲೆ ಸಾಕಷ್ಟು ಶೋಷಣೆಗಳು ನಡೆಯುತ್ತಿವೆ…ವಾಹನಗಳಲ್ಲಿ ಓಡಾಡುವ ಹೆಣ್ಣು ಮಕ್ಕಳ ಸೇಪ್ಟಿಗಾಗಿ ಇದೀಗ ಹೊಸ ಕ್ರಮ ಜಾರಿಗೆ ಬಂದಿದೆ.ವಾಹನ ಸವಾರರೇ ಒಮ್ಮೆ ಗಮನಿಸಿ, ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸೇರಿದಂತೆ ಇತರೆ ಸಾರ್ವಜನಿಕ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಆದೇಶವನ್ನು ಹೊರಡಿಸಿದ್ದು, ಇಂದಿನಿಂದಲೇ ಈ ಹೊಸ ನಿಯಮ ಜಾರಿಗೆ ಬರಲಿದೆ.

ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಹೊಂದಿರುವ ಹೊಸ ವಾಹನಗಳನ್ನು ಜನವರಿ 1 ರಿಂದ ನೋಂದಣಿ ಮಾಡುವುದಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಳೆಯ ವಾಹನಗಳಿಗೆ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಇದೀಗ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ. ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಯೋಜನೆಯನ್ನು ವಾಹನ ಮಾಲೀಕರು ಅಳವಡಿಸಿಕೊಳ್ಳಬೇಕು. ಸರ್ಕಾರದಿಂದ ನೇಮಕಗೊಂಡ ಏಜೆನ್ಸಿಯು ವಾಹನ ಸಂಚಾರದ ಮಾಹಿತಿಯನ್ನು ನಿಯಂತ್ರಣ ಕೇಂದ್ರದಲ್ಲಿ ದಾಖಲಿಸುತ್ತದೆ  ಎಂದು ಹೇಳಲಾಗುತ್ತದೆ..

Edited By

Manjula M

Reported By

Manjula M

Comments