ಬೀ ಕೇರ್’ಫುಲ್..!! ಹೊಸ ವರ್ಷದ ಪಾರ್ಟಿಯಲ್ಲಿ ಕುಡಿದು ವಾಹನ ಚಲಾಯಿಸಿದರೆ ಬೀಳುತ್ತೆ ದಂಡ..!

31 Dec 2018 10:51 AM | General
174 Report

ಹೊಸ ವರ್ಷ ಬಂತು ಅಂದರೆ ಸಾಕು … ಎಲ್ಲರಿಗೂ ಖುಷಿ.. ಮೋಜು ಮಸ್ತಿ ಮಾಡೋದಕ್ಕೆ ಅಂತಾನೆ ಸಿಕ್ಕಾಪಟ್ಟೆ ಫ್ಲಾನ್ ಮಾಡಿಕೊಂಡಿರುತ್ತಾರೆ.. ಪ್ರೆಂಡ್ಸ್ ..ಪ್ಯಾಮಿಲಿ ಎಲ್ಲ ಒಂದು ಕಡೆ ಸೇರಿ ಹಳೇ ವರ್ಷಕ್ಕೆ ಬಾಯ್ ಹೇಳಿ ಹೊಸ ವರ್ಷವನ್ನು ತುಂಬಾ ಸಂಭ್ರಮದಿಂದ  ಬರ ಮಾಡಿಕೊಳ್ಳುತ್ತಾರೆ..  ಹೊಸ ವರ್ಷದ ಆಚರಣೆಯಲ್ಲಿ ಪಾರ್ಟಿ ಮಾಡುವ ಮುನ್ನ ಹುಷಾರ್, ಕುಡಿದು ವಾಹನ ಚಾಲನೆ ಮಾಡಿದರೆ ದಂಡ ಬೀಳೋದು ಗ್ಯಾರಂಟಿ. ಹೊಸ ವರ್ಷದ ಹಿನ್ನೆಲೆಯಲ್ಲಿ ಪಾರ್ಟಿ ಮಾಡಿ ವಾಹನ ಚಲಾಯಿಸಿದರೆ ದಂಡ ಹಾಕಲು ಪೊಲೀಸರು ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಿದ್ದಾರೆ.

ಇಂದು ಬೆಂಗಳೂರಿನ ಎಲ್ಲಾ ಪ್ರಮುಖ ರಸ್ತೆಗಳಲ್ಲಿಯೂ ಕೂಡ ಪೊಲೀಸರು ನಾಕಾ ಬಂದಿ ಹಾಕಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಯನ್ನು ನಡೆಸಲಿದ್ದಾರೆ. ಹಾಗಾಗಿ ಹೊಸ ವರ್ಷದ ಪಾರ್ಟಿಗೆ ಹೋಗುವವರು ಒಬ್ಬ ಚಾಲಕ ಅಥವಾ ಖಾಸಗಿ ಕ್ಯಾಬ್ ಬುಕ್ ಮಾಡಿದರೆ ಒಳ್ಳೆಯದು ಅನ್ನಿಸುತ್ತದೆ..  ನಗರದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರಿಚ್ಯಂಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಅಶೋಕನಗರದ ಎಲ್ಲ ಕಡೆ ಟ್ರಾಫಿಕ್ ಪೊಲೀಸರಿಂದ ಇಂದು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಕುಡಿದು ಡ್ರೈವ್ ಮಾಡುವುದು ತಪ್ಪು.. ಹಾಗಾಗಿ ಕುಡಿದು ವಾಹನ ಚಾಲನೆ ಮಾಡಬೇಡಿ..

Edited By

Manjula M

Reported By

Manjula M

Comments