ಗಂಡನಿಗೆ 80, ಹೆಂಡ್ತಿಗೆ 65…!! ಅಜ್ಜಿ ತಾತ ಆಗೋ ವಯಸ್ಸಿನಲ್ಲಿ ಅಪ್ಪ ಅಮ್ಮ ಆದ್ರು..!!!

28 Dec 2018 9:33 AM | General
420 Report

ಊರು ಹೋಗು ಅಂತಿದೆ, ಕಾಡು ಬಾ ಅಂತಿದೆ ಇಂತ ವಯಸ್ಸಿನಲ್ಲಿ ಎಲ್ಲರಿಗೂ ಅಜ್ಜಿ ತಾತ ಆಗಬೇಕು ಅಂತ ಆಸೆ ಇದ್ದರೆ ಇಲ್ಲೊಂದು ಜೋಡಿ ಇಳಿ ವಯಸ್ಸಿನಲ್ಲಿಯೂ ಕೂಡ ಮುದ್ದಾದ ಮಗುವಿಗೆ ಜನ್ಮ ನೀಡಿ ಅಪ್ಪ ಅಮ್ಮ ಆಗಿದ್ದಾರೆ. ವಿಶ್ವವೇ ಒಂಥರಾ ವಿಸ್ಮಯಗಳ ಸಾಗರ ಎಂದರೆ ತಪ್ಪಾಗುವುದಿಲ್ಲ… ಅದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಒಂದಲ್ಲ ಒಂದು ರೀತಿಯ ವಿಸ್ಮಯಗಳು ನಡೆಯುತ್ತಿರುತ್ತವೆ..ಇದರಿಂದ ಮಾನವ ಕೂಡ ಹೊರತಾಗಿಲ್ಲ..

ಈ ವಯಸ್ಸಿನಲ್ಲಿ ಅಪ್ಪ ಅಮ್ಮ ಆಗಿರುವುದಕ್ಕೆ  ಊರಿನವರು ನಗ್ತ ಇದ್ರೆ ಈ ಜೋಡಿ ಮಾತ್ರ ಖುಷಿ ಖುಷಿಯಾಗಿ ಇದ್ದಾರೆ. ಆತನಿಗೆ 80 ವರ್ಷ.. ಆಕೆಗೆ 65 ವರ್ಷ.. ಹುಣಸೇ ಹಣ್ಣು ಮುಪ್ಪಾದರೂ ಅದರ ಹುಳಿ ಮುಪ್ಪೆ ಅನ್ನೋ ಗಾದೆ ಈ ಸ್ಟೋರಿ ಓದಿದ ಮೇಲೆ ನೆನಪಾಗುತ್ತದೆ. ಜಮ್ಮು ಕಾಶ್ಮೀರದ ಕಣಿವೆ ರಾಜ್ಯದ ಸೇಲನ್ ಜಿಲ್ಲೆಯಲ್ಲಿನ ಮಹಿಳೆಯೋರ್ವಳು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.. ಈ ಮಹಿಳೆಗೆ ಬರೋಬ್ಬರಿ 65 ವರ್ಷ.. ಈ ಮಹಿಳೆಯ ಗಂಡನಿಗೆ 80 ವರ್ಷ… ಈ ಪವಾಡಕ್ಕೆ ಸೇಲನ್ ಜಿಲ್ಲಾಸ್ಪತ್ರೆ ಸಿಬ್ಬಂದಿ ಬೆರಗಾಗಿದ್ದು, ಅಜ್ಜ-ಅಜ್ಜಿ ನಡುವಿನ ಪ್ರೀತಿಗೆ, ಅವರ ಶಾರೀರಿಕ ಸಧೃಡತೆಗೆ ವೈದ್ಯ ಲೋಕವೇ ಸೈ ಎಂದಿದೆ. 

Edited By

Manjula M

Reported By

Manjula M

Comments