ಗಗನಯಾತ್ರಿಗಳು ಭೂಮಿಗೆ ಬಂದ ಮೇಲೆ ಹೇಗೆ ನಡೆಯುತ್ತಾರೆ..!! ಈ ವಿಡಿಯೋ ನೋಡಿ

27 Dec 2018 10:06 AM | General
261 Report

ಗಗನಯಾತ್ರಿಗಳು ಅಂದ್ರೆ ಸುಮ್ಮನೇನಾ.. ಅದಕ್ಕೂ ಸಿಕ್ಕಾಪಟ್ಟೆ ಧೈರ್ಯ ಇರಬೇಕು. ಸಿಕ್ಕಾಪಟ್ಟೆ ಕಷ್ಟ ಪಡಬೇಕು... ಬಾಹ್ಯಾಕಾಶದಲ್ಲಿ 197 ದಿನಗಳನ್ನು ಕಳೆದು ಭೂಮಿಗೆ ಮರಳಿದ ಗಗನಯಾತ್ರಿಯೊಬ್ಬರು ನಡೆದಾಡಲು ಕಷ್ಟಪಡುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಗಗನಯಾತ್ರಿ ಎಜೆ ಫ್ಯೂಸ್ಟೆಲ್ 197 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಕೊನೆಗೂ ವಾಪಸ್ ಬಂದಿದ್ದಾರೆ.

ಗುರುತ್ವಾಕರ್ಷಣೆಯಿಲ್ಲದ ಬಾಹ್ಯಾಕಾಶದಲ್ಲಿ ಬದುಕುವುದು ಹೇಗೆ ಎಂಬುದಕ್ಕಾಗಿ ಗಗನಯಾತ್ರಿಗಳಿಗೆ ತರಬೇತಿ ನೀಡಲಾಗುತ್ತದೆ. ಹಲವು ದಿನಗಳನ್ನು ಅಲ್ಲಿ ಕಳೆದ ನಂತರ ಬಾಹ್ಯಾಕಾಶದ ವಾತಾವರಣಕ್ಕೆ ಹೊಂದಿಕೊಂಡ ಗಗನಯಾತ್ರಿಗಳು ಭೂಮಿಗೆ ಆಗಮಿಸಿದ ಆರಂಭದಲ್ಲಿ ಇಲ್ಲಿನ ವಾತಾವರಣಕ್ಕೆ ಹಾಗು ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವುದು ಕಷ್ಟವೇ ಸರಿ. ಗಗನಯಾತ್ರಿ ಫ್ಯೂಸ್ಟೆಲ್ ನಡೆಯಲು ಇದೀಗ ಸಿಕ್ಕಾಪಟ್ಟೆ ಕಷ್ಟಪಡುತ್ತಿದ್ದಾರೆ, ಅವರ ಸಮೀಪದಲ್ಲಿದ್ದ ಇಬ್ಬರು ಅವರಿಗೆ ನಡೆಯುತ್ತಿರುವುದನ್ನು ಅಭ್ಯಾಸ ಮಾಡಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆಸ್ವತಃ ಫ್ಯೂಸ್ಟೆಲ್ ಪೋಸ್ಟ್ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ..

Edited By

Manjula M

Reported By

Manjula M

Comments