ಸೂಲಗಿತ್ತಿ ನರಸಮ್ಮ ಸಮಾಧಿಗೆ ಜಾಗ ಹುಡುಕಲು ಮೀನಾಮೇಷ ಎಣಿಸುತ್ತಿದೆ..!!

26 Dec 2018 4:18 PM | General
257 Report

ನೆನ್ನೆ ಅಷ್ಟೆ ಸೂಲಗಿತ್ತಿ ನರಸಮ್ಮ ನಿಧನರಾಗಿರುವ ಹಿನ್ನೆಲೆಯಲ್ಲಿ ಅವರ ಸಮಾಧಿಗೆ ಜಾಗ ಗುರುತಿಸಲು ಜಿಲ್ಲಾಡಳಿತ ಇದೀಗ ಮೀನಾಮೇಷ ಎಣಿಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿದೆ. .ತುಮಕೂರಿನಲ್ಲಿ ಸೂಲಗಿತ್ತಿ ನರಸಮ್ಮರ ಅಂತ್ಯಕ್ರಿಯೆ ಜಾಗ ನೀಡಲು ಮೀನಾಮೇಷ ಎಣಿಸುತ್ತಿದೆ ಎಂದು ಜಿಲ್ಲಾಡಳಿತದ ವಿರುದ್ಧ ನರಸಮ್ಮರ ಮಗ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ನರಸಮ್ಮ ಮಗ ಪಾವಗಡ ಶ್ರೀರಾಮ್ ಆಕ್ರೋಶ ವ್ಯಕ್ತಪಡಿಸಿದ್ದು, ತುಮಕೂರಿನಲ್ಲಿ ಸ್ಮಾರಕ ನಿರ್ಮಾಣದ ಕನಸು ಹೊಂದಿದ್ದೇವೆ. ಎಂದು ತಿಳಿಸಿದರು

ಸ್ಮಾರಕ ಇರಲಿ ಇಲ್ಲಿ ತಾಯಿಯವರನ್ನು ಮಣ್ಣು ಮಾಡಲು ಆರು ಮೂರಡಿ ಜಾಗ ನೀಡುತ್ತಿಲ್ಲ. ಎಸ್ ಎಸ್ಟಿ ಸ್ಮಶಾಣಕ್ಕೆ ಮೀಸಲಿರೋ ಜಾಗದಲ್ಲಿ ಜಾಗ ನೀಡ್ತೀವಿ ಅಂತಿದ್ದಾರೆ ಎಂದು ದೂರಿದ್ದಾರೆ. ಮಧ್ಯಾಹ್ನ ಒಂದು ಗಂಟೆಯಾದರೂ ಇನ್ನೂ ಜಾಗದ ಹುಡುಕಾಟ ನಡಿತೀದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಮಾರಕಕ್ಕೆ ಜಾಗ ನೀಡುವ ವಿಚಾರದಲ್ಲಿ ಗೊಂದಲ ಉಂಟಾಗಿದೆ. ನಾವು ಅರ್ಧ ಎಕರೆ ಜಾಗವಷ್ಟೇ ಕೇಳಿರೋದು. ಅದನ್ನ ಸಹ ನೀಡೋಕೆ ಸರ್ಕಾರ ಮೀನಾಮೇಷ ಏಣಿಸ್ತಾ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

Edited By

Manjula M

Reported By

Manjula M

Comments