ರೋಗಿಗಳಿಗೆ ಕೊಡಬೇಕಿದ್ದ ಮಾತ್ರೆಗಳಿಗೆ ಬೆಂಕಿ ಹಚ್ಚಿದ್ರಾ..!?

21 Dec 2018 5:45 PM | General
286 Report

ಕಲಬುರ್ಗಿಯ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಬಳಿ ಅವಧಿ ಮುಗಿದ ಮಾತ್ರೆಗಳ ಜೊತೆಗೆ ಅವಧಿ ಪೂರ್ಣಗೊಳ್ಳದ ಹಾಗೂ ರೋಗಿಗಳಿಗೆ ವಿತರಣೆ ಮಾಡಬೇಕಿದ್ದ ಮಾತ್ರೆಗಳಿಗೂ ಬೆಂಕಿ ಹಚ್ಚಿರುವಂತಹ ಘಟನೆ ನಡೆದಿದೆ. ಈ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ  ಔಷಧಿಗಳು ಬೆಂಕಿಗೆ ಆಹುತಿಯಾಗಿದೆ ಎಂದು ಹೇಳಲಾಗುತ್ತಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ... ಆದರೆ ಇವೆಲ್ಲಾ ಅವಧಿ ಮೀರಿದ  ಔಷಧ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸುತ್ತಿದ್ದಾರೆ. ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿಯೇ ವಿಲೇವಾರಿ ಮಾಡಬೇಕೆಂಬ ನಿಯಮವಿದೆ. ಆದರೂ ಬಯಲು ಪ್ರದೇಶದಲ್ಲಿ ಬೆಂಕಿ ಹಚ್ಚಿ ನಿರ್ಲಕ್ಷ್ಯ ತೋರಿರುವ ಸಿಬ್ಬಂದಿಯ ಕ್ರಮಕ್ಕೆ ಜನರು ಗರಂ ಆಗಿದ್ದಾರೆ. ಈ ಘಟನೆಯ ವಿರುದ್ದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By

Manjula M

Reported By

Manjula M

Comments