ಬಿಸಿಯೂಟದ ಸಾಂಬಾರಿನಲ್ಲಿ ಹಲ್ಲಿ: ಊಟ ಮಾಡಿದ 190 ವಿದ್ಯಾರ್ಥಿಗಳು ಅಸ್ವಸ್ಥ

20 Dec 2018 5:35 PM | General
139 Report

ಸರ್ಕಾರಿ ಶಾಲೆಗಳೆಲ್ಲಾ ಬಿಸಿಯೂಟ ಯೋಜನೆ ಚಾಲ್ತಿಯಲ್ಲಿದೆ.. ಬಾಗಲಕೋಟೆ ಶಾಲೆಯ ಮಧ್ಯಾಹ್ನದ ಬಿಸಿಯೂಟದ ಸಾಂಬಾರಿನಲ್ಲಿ ಹಲ್ಲಿ ಬಿದ್ದು ಆಹಾರ ತಿಂದು 40 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಮಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಊಟ ಮಾಡಿ ಅಸ್ವಸ್ಥಗೊಂಡ‌ ವಿದ್ಯಾರ್ಥಿಗಳನ್ನ ಕಮತಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಊಟ ಸೇವಿಸಿದ 40 ವಿದ್ಯಾರ್ಥಿಗಳಲ್ಲಿ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿದ್ದಾರೆ. ಶಾಲೆಯಲ್ಲಿ ಒಟ್ಟು 190 ವಿದ್ಯಾರ್ಥಿಗಳು ಊಟ ಸೇವಿಸಿದ್ದಾರೆ. ಮುಂಜಾಗೃತ ಕ್ರಮವಾಗಿ ಎಲ್ಲ ವಿದ್ಯಾರ್ಥಿಗಳನ್ನ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೋಷಕರು ಈ ಘಟನೆಯಿಂದ ಆತಂಕಗೊಂಡಿದ್ದಾರೆ

Edited By

Manjula M

Reported By

Manjula M

Comments