ಪೆಥೈ ಚಂಡಮಾರುತ ಹಿನ್ನಲೆ ರಾಜ್ಯದಲ್ಲಿ ಹೆಚ್ಚಿದ ಚಳಿ..!!

20 Dec 2018 12:11 PM | General
176 Report

ಅಕ್ಟೋಬರ್, ನವೆಂಬರ್ ಬಂತು ಅಂದ್ರೆ ಸಾಕು ಚಳಿಗಾಲ ಶುರುವಾದ ಆಗೆ..  ಪೆಥೈ ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದ ಕನಿಷ್ಠ ತಾಪಮಾನ 10-8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಮಡಿಕೇರಿ, ಆಗುಂಬೆ, ಹಾಸನ, ಬೀದರ್, ಮೈಸೂರಿನಲ್ಲಿ ಹವಾಮಾನ ತೀರಾ ಕುಸಿದಿರುವ ಕಾರಣ ಕೊಲ್ಲಿ ಬಳಿ ಕಾಣಿಸಿಕೊಂಡ ಪೆಥೈ ಚಂಡಮಾರುತ ಇದೀಗ ದುರ್ಬಲವಾಗಿದೆ.

ಇದರ ಪರಿಣಾಮದಿಂದ ರಾಜ್ಯದಲ್ಲಿ ಚಳಿ ಹೆಚ್ಚಾಗಿದ್ದು ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 8, 10, 11 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ದಾಖಲಾಗಿದೆ.ಕೇಂದ್ರದ ವಿಜ್ಞಾನಿ ಎಸ್‌ಎಸ್‌ಎಂ ಗವಾಸ್ಕರ್‌ ಅವರು ರಾಜ್ಯದ ಒಳನಾಡಿನಲ್ಲಿ ಹೆಚ್ಚು ಮೋಡ ಇರುವುದರಿಂದ ಚಳಿ ಹೆಚ್ಚಾಗಿದೆ. ಹವಾಮಾನ ಇಲಾಖೆಯ ವರದಿಯಂತೆ, ಮಡಿಕೇರಿಯಲ್ಲಿ 8.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದು ದಿನಕ್ಕಿಂತ 4.2 ಡಿಗ್ರಿ  ಸೆಲ್ಸಿಯಸ್‌ನಷ್ಟು ಕಡಿಮೆ. ಇನ್ನು ಕೆಲವೇ ದಿನಗಳಲ್ಲಿ ಚಳಿಗಾಲದಲ್ಲಿ ವಾಡಿಕೆಯಂತೆ ಕಂಡುಬರುವ ತಾಪಮಾನ ದಾಖಲಾಗಲಿದೆ ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments