ಮಾರಮ್ಮನ  ಪ್ರಸಾದಕ್ಕೆ ವಿಷಹಾಕಿದ ಅಂಬಿಕಾ ಎನ್ನುವ ವಿಷ ಕನ್ಯೆ..!!

19 Dec 2018 10:55 AM | General
176 Report

ಸುಳ್ವಾಡಿ ಕಿಚ್ಚುಗತ್ತಿ ಮಾರಮ್ಮ ವಿಷ ಪ್ರಸಾದ ದುರಂತಕ್ಕೆ ಸಂಬಂಧ ಪಟ್ಟಂತೆ ದೇವಸ್ಥಾನದ ವ್ಯವಸ್ಥಾಪಕರಾದ ಮಾದೇಶ್ ಎಂಬುವನ ಪತ್ನಿ ಅಂಬಿಕಾ ವಿಷ ಪ್ರಕರಣದ ರಹಸ್ಯವನ್ನು ಬಹಿರಂಗ ಪಡಿಸಿದ್ದಾಳೆ ಎಂದು ಹೇಳಲಾಗುತ್ತಿದೆ.ಸುಳ್ವಾಡಿ ದುರಂತಕ್ಕೆ ಸಂಬಂಧ ಪಟ್ಟಂತೆ ದೇವಾಲಯದ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವ ಸ್ವಾಮೀಜಿ ಸೇರಿದಂತೆ ಎಲ್ಲ ಟ್ರಸ್ಟಿಗಳನ್ನು ಮಂಗಳವಾರವೂ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಈಗಾಗಲೇ ಪೊಲೀಸರ ವಶದಲ್ಲಿರುವ ಹಾಗೂ ಎಫ್ ಐಆರ್ ನಲ್ಲಿ ದಾಖಲಾಗಿರುವ ಮಾದೇಶ ಎಂಬುವವರ ಪತ್ನಿ ಅಂಬಿಕಾ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ವಿಷ ಪ್ರಕರಣದ ರಹಸ್ಯ ಬಹಿರಂಗ ಪಡಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಇನ್ನು ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈವರೆಗೆ ಯಾರನ್ನೂ ಬಂಧಿಸಿಲಾಗಿಲ್ಲ.. ಇನ್ನೂ ತನಿಖೆ ಚುರುಕುಗೊಂಡು ಅಪರಾಧಿಗಳನ್ನು ಬಂಧಿಸಬೇಕಷ್ಟೆ..

Edited By

Manjula M

Reported By

Manjula M

Comments