ವರ್ಷಕೊಮ್ಮೆ ಋತುಮತಿಯಾಗುತ್ತಾಳಂತೆ ಈ ‘ದೇವಿ’..!! ಕಥೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ…!!!

17 Dec 2018 1:40 PM | General
710 Report

ಇಂದಿಗೂ ಹೆಣ್ಣುಮಕ್ಕಳು ಋತುಮತಿಯಾದರೇ ಮೈಲಿಗೆ ಅನ್ನೋರೇ ಹೆಚ್ಚು. ಹೆಚ್ಚು ಕುಟುಂಬಗಳಲ್ಲಿ  ಇಂದಿಗೂ ಹೆಣ್ಣುಮಕ್ಕಳು  ರಜೆಯಾದರೇ ಅವರನ್ನು ದೇವರ ಕೋಣೆಯಿಂದ  ಅಷ್ಟೇಯಾಕೇ ಅವರನ್ನು ತುಚ್ಛವಾಗಿ ಕಾಣಲಾಗುತ್ತದೆ. ವಿಚಿತ್ರವೆಂದರೇ ನಾವು ಹೇಳ ಹೊರಟಿರುವ ಕಥೆ ಋತುಮತಿಯಾಗೋ ದೇವರ ಬಗ್ಗೆ. ಅಚ್ಚರಿಯಯಾಗಬಹುದೇನೋ  ಈ ಸ್ಟೋರಿ ಓದಿ…. ಆದರೆ ಇದೂ ಸತ್ಯ. ಇಲ್ಲೊಂದು ದೇವಿ ಋತುಮತಿಯಾಗುತ್ತಾಳಂತೆ. ಈ ದೇವಿ ಗರ್ಭಕ್ಕೆ ಮತ್ತು ಯೋನಿಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಹೌದು. ಅಂದಹಾಗೇ ಈ  ಋತುಮತಿ ದೇವಿಯ ಕಂಪ್ಲೀಟ್ ಕಥೆ ಇಲ್ಲಿದೆ ನೋಡಿ.

ಅಂದಹಾಗೇ ಶಬರಿಮಲೆಯಂಥ ದೇವಸ್ಥಾನಗಳಲ್ಲಿ ಋತುಮತಿಯಾಗೋ 10-50 ವರ್ಷದ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿಕೊಡಬೇಕೆಂಬ ಹೋರಾಟ ನಡೆಯುತ್ತಿದೆ. ಅಲ್ಲದೇ, ದೇಶದ ಬಹುತೇಕ ದೇವಸ್ಥಾನಗಳಲ್ಲಿ ಪಿರಿಯಡ್ಸ್ ಟೈಮಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿರುತ್ತದೆ. ಆದರೆ ಅಸ್ಸಾಮ್‌ನಲ್ಲೊಂದು ದೇವಾಲಯವಿದೆ. ಇಲ್ಲಿ ಋತುಮತಿಯಾದ ದೇವಿಯ ಹಬ್ಬ ಆಚರಿಸುತ್ತಾರೆ.ಈ ಕಾಮಖ್ಯ ದೇವಿ ದೇವಾಲಯ ಗುವಾಹಟಿಯ ನೀಲಾಚಲ್ ಪರ್ವತದ ಮೇಲಿದೆ. ಈ ದೇವಿಯನ್ನು ರಕ್ತಸ್ರಾವದ ದೇವತೆ ಎಂದೇ ಕರೆಯಲಾಗುತ್ತದೆ. ಈ ದೇವಾಲಯದಲ್ಲಿರುವ ಗರ್ಭಗುಡಿಯಲ್ಲಿ ದೇವಿ ಗರ್ಭ ಮತ್ತು ಯೋನಿಯನ್ನೇ ಪೂಜಿಸಲಾಗುತ್ತದೆ.ದೇವಿ ಋತುಮತಿಯಾಗುತ್ತಾಳೆ ಎಂಬ ಮಾತಿಗೆ ಪುಷ್ಟಿ ನೀಡುವಂತೆ ಪ್ರತಿವರ್ಷ ಆಷಾಢ ಮಾಸದಲ್ಲಿ ಅಂದರೆ ಜೂನ್‌ನಲ್ಲಿ ಈ ದೇವಾಲಯದ ಬಳಿ ಇರುವ ಬ್ರಹ್ಮಪುತ್ರ ನದಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಸಮಯದಲ್ಲಿ ದೇವಿಗೆ ಋತುಸ್ರಾವವಾಗುತ್ತದೆ ಎಂದೇ ಜನರು ನಂಬುತ್ತಾರೆ.

ದೇಶದ ಕೆಲ ದೇವಾಲಯಗಳಲ್ಲಿ ಇಂದಿಗೂ ಋತುಮತಿಯಾದ ಹೆಣ್ಣುಮಕ್ಕಳ ಪ್ರವೇಷಕ್ಕೆ  ನಿಷೇಧವಿದೆ. ಆದರೆ ಈ ದೇವಾಲಯದಲ್ಲಿ ರುತುಮತಿಯಾದ ದೇವರಿಗೆಯೇ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿನ ದೇವಿ ಋತುಮತಿಯಾಗುತ್ತಾಳಂತೆ. ಆಕೆಯ ಯೋನಿಗೆಯೇ ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಗುತ್ತದೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ ಅಲ್ಲವೇ…..  ಈ ದೇವಾಲಯದಲ್ಲಿ ಮಹಿಳೆಯ ಈ ವಿಶೇಷತೆಯನ್ನು ತಾಯಿಯಾಗುವ ಪ್ರಕ್ರಿಯೆಗೆ ಹೋಲಿಸುತ್ತಾರೆ. ಈ ದೇವಾಲಯದಲ್ಲಿ ದೇವಿ ಶಕ್ತಿ ರೂಪದಲ್ಲಿದ್ದಾಳೆಂದು ಭಕ್ತರು ನಂಬಿದ್ದಾರೆ.

ಪೌರಾಣಿಕ ಹಿನ್ನೆಲೆ:

ದೇವಸ್ಥಾನದಲ್ಲಿ ಆಚರಿಸುವ ಈ ಪದ್ಧತಿಗೆ ಪೌರಾಣಿಕ ಹಿನ್ನೆಲೆಯೂ ಇದೆ. ದಕ್ಷ ಒಮ್ಮೆ ಒಂದು ಬಾರಿ ಬೃಹತ್ ಯಜ್ಞ ಮಾಡುತ್ತಾನೆ. ಆದರೆ ಅದಕ್ಕೆ ಶಿವ ಮತ್ತು ಸತಿಯನ್ನು ಆಹ್ವಾನಿಸಿರುವುದಿಲ್ಲ. ಆದರೂ ಸತಿ ಶಿವನ ಅನುಮತಿ ಇಲ್ಲದೆ ಅಲ್ಲಿಗೆ ತೆರಳುತ್ತಾಳೆ. ಅಲ್ಲಿ ದಕ್ಷ ಶಿವನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ಇದರಿಂದ ಅವಮಾನವಾದ ಸತಿ, ಯಜ್ಞ ಕುಂಡಕ್ಕೆ ಹಾರಿ ತನ್ನ ಜೀವವನ್ನು ತ್ಯಾಗ ಮಾಡುತ್ತಾಳೆ.ಈ ವಿಷಯ ತಿಳಿದ ಶಿವ ಕೋಪೋದ್ರಿಕ್ತನಾಗಿ ಅಲ್ಲಿಗೆ ತೆರಳಿ ಸತಿಯ ದೇಹವನ್ನು ಹಿಡಿದುಕೊಂಡು ತಾಂಡವ ನೃತ್ಯವಾಡಲು ತೊಡಗುತ್ತಾನೆ. ಆತನ ಕೋಪವನ್ನು ಕಡಿಮೆ ಮಾಡಲು ವಿಷ್ಣು ತನ್ನ ಚಕ್ರವನ್ನು ಕಳುಹಿಸಿ, ಸತಿಯ ದೇಹವನ್ನು ಛಿದ್ರ ಮಾಡುತ್ತಾನೆ. ಅದು 108 ಭಾಗಗಳಲ್ಲಿ ಬಿದ್ದವು. ಅವುಗಳೇ ಎಲ್ಲೆಡೆ ಶಕ್ತಿ ಪೀಠವಾಗಿ ಪೂಜಿಸಲಾಗುತ್ತಿದೆ.

Edited By

Manjula M

Reported By

Manjula M

Comments