ಕೋಟಿಲಿಂಗೇಶ್ವರ ದೇಗುಲ ಸ್ಥಾಪಿಸಿದ ಸ್ವಾಮೀಜಿ ಇನ್ನಿಲ್ಲ

15 Dec 2018 5:15 PM | General
110 Report

ಕೋಟಿಲಿಂಗೇಶ್ವರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದ ಸ್ಥಾಪಕ ಸಾಂಬಶಿವಸ್ವಾಮಿ (72) ಶುಕ್ರವಾರ ಕೊನೆಯುಸಿರೆಳೆದಿದ್ದಾರೆ…ಗುರುವಾರ  ಬೆಳಿಗ್ಗೆ  ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬೆಂಗಳೂರಿನ ಮಹಾವೀರ್‌ ಜೈನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು..  ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ 4.15 ಸುಮಾರಿಗೆ ಮೃತಪಟ್ಟಿದ್ದಾರೆ.

1979ರ ಸುಮಾರಿನಲ್ಲಿ ಕಮ್ಮಸಂದ್ರದ ತಮ್ಮ ಸ್ವಂತ ಜಮೀನಿನಲ್ಲಿ ದೇವಾಲಯ ನಿರ್ಮಾಣ ಮಾಡುವ ಸಂಕಲ್ಪ ಹೊಂದಿ ಕೋಟಿಲಿಂಗೇಶ್ವರ ದೇವಾಲಯಕ್ಕೆ ಅಡಿಪಾಯವನ್ನು  ಹಾಕಿದರು. ನಂತರ ದೇವಾಲಯದ ಸಮುಚ್ಚಯದಲ್ಲಿ ಒಂದೊಂದೇ ದೇವಾಲಯಗಳು ಪ್ರಾರಂಭವಾದವು. ದೇವಾಲಯದ ವಿಸ್ತೀರ್ಣವು ದೊಡ್ಡದಾಯಿತು... ಸ್ವಾಮೀಜಿಯವರ ಆಸೆಯಂತೆ 108 ಅಡಿಗಳ ಬೃಹತ್‌ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಯಿತು. ನಂತರ 60 ಅಡಿ ಲಿಂಗ ಬೃಹತ್‌ ನಂದಿ ಸೇರಿದಂತೆ ಸಹಸ್ರಾರು ಲಿಂಗಗಳ ಪ್ರತಿಷ್ಠಾಪನೆ ಮಾಡಲಾಯಿತು. ಅದಕ್ಕೆ ಕೋಟಿ ಲಿಂಗೇಶ್ವರ ಎಂದು ಕೂಡ ನಾಮಕರಣ ಮಾಡಲಾಯಿತು.

Edited By

Manjula M

Reported By

Manjula M

Comments