ಈ ಐದು ದಿನ ಬ್ಯಾಂಕ್ ಗೆ ರಜೆ..?ಬ್ಯಾಂಕ್ ಕೆಲಸಗಳನ್ನು ಬೇಗ ಮುಗಿಸಿಕೊಳ್ಳಿ..!!

15 Dec 2018 3:35 PM | General
541 Report

ಇತ್ತಿಚಿಗೆ ಬ್ಯಾಂಕ್ ಒಂದು ದಿನ ರಜೆ ಇದ್ದರೆ ಸಾಕು ಒಂದಷ್ಟು ಕೆಲಸಗಳು ಹಾಗೆಯೇ ಉಳಿದುಕೊಂಡು ಬಿಡುತ್ವೆ..ಹಣಕಾಸು ವ್ಯವಹಾರಕ್ಕೆ ಸ್ವಲ್ಪ ಕಷ್ಟ ಆಗಬಹುದು.. ಡಿಸೆಂಬರ್ ತಿಂಗಳಲ್ಲಿ ಒಟ್ಟು ಐದು 5 ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ ಎಂಬ ಮಾತು ಕೇಳಿ ಬರುತ್ತಿವೆ. ಮುಷ್ಕರ, ಹಬ್ಬ, ವಾರಾಂತ್ಯ ರಜೆಗಳ ಪರಿಣಾಮವಾಗಿ ಒಟ್ಟು 5 ದಿನ ಬ್ಯಾಂಕ್ ಬಂದ್ ಆಗಿರಲಿವೆ ಎನ್ನಲಾಗಿದೆ.

ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಪ್ರತ್ಯೇಕವಾಗಿ ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಉದ್ದೇಶಿಸಿದ್ದು, ಡಿ.21 ಕ್ಕೆ ಬ್ಯಾಂಕ್ ಆಫೀಸರ್ಸ್ ಯೂನಿಯನ್ ಮುಷ್ಕರ ಕ್ಕೆ ಕರೆ ನೀಡಿದೆ. ಡಿ.22 ಕ್ಕೆ ನಾಲ್ಕನೇ ಶನಿವಾರ ವಾದ ಕಾರಣ ಬ್ಯಾಂಕ್​ಗೆ ರಜೆ ಇದ್ದು, ಡಿ.23 ಭಾನುವಾರ ಮತ್ತು ಡಿ.25 ಕ್ಕೆ ಕ್ರಿಸ್​ಮಸ್ ಹಾಗೂ ಬ್ಯಾಂಕ್ ಒಕ್ಕೂಟಗಳ ಮಹಾವೇದಿಕೆ (ಯುಎಫ್​ಬಿಯು) ಡಿ.26 ರಂದು ಮುಷ್ಕರ ಕ್ಕೆ ಕರೆ ನೀಡಿದೆ. ಹೀಗಾಗಿ ಡಿ.24ಹೊರತುಪಡಿಸಿ ಉಳಿದ ಐದು ದಿನ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments