ಮಹಿಳೆಯರೇ ಎಚ್ಚರ:  ಫೇಸ್ ಬುಕ್ ನಲ್ಲಿ ಪರಿಚಯವಿಲ್ಲದವರನ್ನು ಫ್ರೆಂಡ್ ಮಾಡಿಕೊಳ್ಳುವ ಮುನ್ನ ಯೋಚಿಸಿ..!!

15 Dec 2018 10:29 AM | General
170 Report

ಇತ್ತಿಚಿಗೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಸದ್ದು ಮಾಡುತ್ತಿವೆ…  ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯದಕ್ಕೆ ಬಳಸಿಕೊಳ್ಳುವುದಕ್ಕಿಂತ  ಕೆಟ್ಟದಕ್ಕೆ ಬಳಸಿಕೊಳ್ಳುವುದೇ ಹೆಚ್ಚಾಗಿದೆ.. ಹಾಗಾಗಿ ಪೇಸ್’ಬುಕ್ ‘ನಲ್ಲಿ ಮಹಿಳೆಯೊಬ್ಬಳು ಫೇಸ್ ಬುಕ್ ಫ್ರೆಂಡ್’ವೊಬ್ಬನನ್ನು ನಂಬಿ ಆತನಿಂದ ವಂಚನೆಗೆ ಒಳಗಾಗಿರುವ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಮಹಿಳೆಗೆ ವಾದಿರಾಜ್ ಎನ್ನುವ ವ್ಯಕ್ತಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದನು. ಮಹಿಳೆ ಆತ ಯಾರೆಂದು ನೋಡದೆ ಆತನ ಫ್ರೆಂಡ್ ರಿಕ್ವೆಸ್ಟ್ ನ್ನು ಅಕ್ಸೆಪ್ಟ್ ಮಾಡಿಕೊಂಡು ಆತನ ಜೊತೆ ಮೆಸೆಂಜರ್ ನಲ್ಲಿ ಚಾಟ್ ಮಾಡಲು ಶುರುಮಾಡಿದ್ದಾಳೆ.

ನಂತರ ಆತನ ಮಾತುಗಳಿಗೆ ಮರುಳಾದ ಮಹಿಳೆಗೆ ಆತ ಮದುವೆಯಾಗುವುದಾಗಿ ಭರವಸೆ ಕೊಟ್ಟು, ಆಕೆಯನ್ನು ಲಾಡ್ಜ್ ಗೆ ಕರೆಸಿಕೊಂಡಿದ್ದಾನೆ. ಅಲ್ಲದೇ ಮದುವೆಯಾಗ್ತಿದ್ದೇವೆ ಮನೆಬೇಕು ಹಣ ಬೇಕು ಎಂದು ಹೇಳಿ ಆಕೆಯಿಂದ ಹಣವನ್ನು ಕೂಡ ತೆಗೆದುಕೊಂಡಿದ್ದಾನೆ. ಅಲ್ಲದೇ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಹೇಳಿ ಆಕೆಯ ಸಂಬಂಧಿಕರಿಂದಲೂ ಹಣವನ್ನು ಕೊಳ್ಳೆ ಹೊಡೆದು ಪರಾರಿಯಾಗಿದ್ದಾನೆ. ಹಾಗಾಗಿ ಫೇಸ್ ಬುಕ್ ನಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನಾ ಎಚ್ಚರದಿಂದ ಇರಿ..

Edited By

Manjula M

Reported By

Manjula M

Comments