ಹೆಲ್ಮೆಟ್ ನಿಂದ ಬಸ್ ಗ್ಲಾಸ್ ಹೊಡೆದ ಟ್ರಾಫಿಕ್ ಪೋಲಿಸ್..!! ವಿಡಿಯೋ ಮಾಡಿ ಕಣ್ಣೀರಿಟ್ಟ ಬಸ್ ಚಾಲಕ..!!!

14 Dec 2018 5:37 PM | General
191 Report

ಬೆಂಗಳೂರಿನಲ್ಲಿ ನ ಟ್ರಾಫಿಕ್ ಜಾಮ್ ಬಗ್ಗೆ ಹೇಳಲೇ ಬೇಕಿಲ್ಲ ಬಿಡಿ… ಸಿಕ್ಕಾಪಟ್ಟೆ ಟ್ರಾಪಿಕ್ ಜಾಮ್ ಅನ್ನೋದು ಎಲ್ಲರಿಗೂ ಕೂಡ ತಿಳಿದಿರುವ ವಿಷಯವೇ.. ಸಿಗ್ನಲ್‌ ನಲ್ಲಿ ಟ್ರಾಫಿಕ್ ಜಾಮ್ ಆಗತ್ತೆ ಅಂತ ಬಸ್ ಮುಂದೆ ನಿಲ್ಲಿಸಿದಕ್ಕೆ ಟ್ರಾಫಿಕ್ ಪೋಲಿಸ್ ಬಸ್ ಗ್ಲಾಸ್ ನ ಪೀಸ್ ಪೀಸ್ ಮಾಡಿರುವಂತಹ ಘಟನೆ ಬೆಂಗಳೂರಿನ ಮಡಿವಾಳ ಟ್ರಾಫಿಕ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ…ಈ ಘಟನೆ ಬಗ್ಗೆ ವಿಡಿಯೋ ಮಾಡಿರುವ ಬಸ್ ಚಾಲಕ ತನಗೆ ಆಗಿರುವ ಆನ್ಯಾಯದ ಬಗ್ಗೆ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ.

ಡಿಸೆಂಬರ್ 11ರಂದು ಬೆಂಗಳೂರಿನ ಮಡಿವಾಳ ಸಿಗ್ನಲ್ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮಡಿವಾಳ ಅಂಡರ್ ಪಾಸ್ ಸಿಗ್ನಲ್ ಬಳಿ ಬಿ.ಎಂ.ಟಿ.ಸಿ ಬಸ್ ಸಂಚಾರ ಮಾಡುತ್ತಿದ್ದವು.. , ಹೀಗಾಗಿ ಬಸ್ ಹಿಂದೆ ಕೆಎಸ್’ಆರ್ ಟಿಸಿ  ಬಸ್ ಚಾಲಕ ತಮ್ಮ ಪಾಡಿಗೆ ತಾನು ಬಸ್ ಅನ್ನು ಚಾಲನೆ ಮಾಡಿಕೊಂಡು ಬಂದಿದ್ದಾನಂತೆ. ಈ ವೇಳೆ ಮಡಿವಾಳ ಟ್ರಾಫಿಕ್ ಠಾಣೆ ಎ.ಎಸ್.ಐ ಗಿರಿಯಪ್ಪ ಬಸ್ ಗೆ ತನ್ನ ಹೆಲ್ಮೆಟ್ ನಿಂದ ಹೊಡೆದು ಗ್ಲಾಸ್ ಅನ್ನು ಪುಡಿ ಪುಡಿ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸ್ ಮಾಡಿರುವ  ದೌರ್ಜನ್ಯ ಖಂಡಿಸಿ ಬಸ್ ಚಾಲಕ ಫೆಸ್ಬುಕ್ ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದು  ಆ ವಿಡಿಯೋ ವೈರಲ್ ಆಗಿದೆ.

Edited By

Manjula M

Reported By

Manjula M

Comments