ಸಾರಿಗೆ ಬಸ್ ಚಲಿಸುತ್ತಿರುವಾಗಲೇ ಹಿಂಬದಿ ಚಕ್ರಗಳು ಕಳಚಿ ಅಪಘಾತ..!

13 Dec 2018 9:17 AM | General
221 Report

ಇತ್ತಿಚಿಗೆ ಅಪಘಾತಗಳು ಜಾಸ್ತಿಯಾಗುತ್ತಲೆ ಇವೆ.. ಇದೀಗ ಸಾರಿಗೆ ಬಸ್ಸೊಂದು ಚಲಿಸುತ್ತಿರುವಾಗಲೇ ಬಸ್ಸಿನ ಹಿಂಬದಿ ಗಾಲಿಗಳು ಕಳಚಿಕೊಂಡು ಅಪಘಾತಕ್ಕೀಡಾದ ಘಟನೆ ಸಿಂಧಗಿ ಪಟ್ಟಣದ ಅಗ್ನಿಶಾಮಕ ಠಾಣೆಯ ಬಳಿ ನಡೆದಿದೆ. ಸಾರಿಗೆ ಬಸ್ಸಿನಲ್ಲಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಇತರೆ ಪ್ರಯಾಣಿಕರಿದ್ದರು ಎನ್ನಲಾಗಿದೆ.

ಸಿಂಧಗಿ ತಾಲೂಕಿನ ಬೋರಗಿಯಿದ ಸಿಂದಗಿಯತ್ತ ಹೊರಟ್ಟಿದ್ದಾಗ ಇದ್ದಕ್ಕಿದ್ದಂತೆ ಹಿಂಬದಿಯ ಎರಡು ಚಕ್ರಗಳು ಕಳಚಿಕೊಂಡವು. ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡದೊಂದು ಅನಾಹುತ ತಪ್ಪಿದಂತಾಗಿದೆ.. ಇನ್ನು ಸಾರಿಗೆ ಬಸ್ ಘಟಕ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಿದರೂ ಸಂಚಾರ ಯೋಗ್ಯ ಬಸ್ಸುಗಳನ್ನು ಕೊಟ್ಟಿಲ್ಲ. ರಾಜ್ಯದ ಹಲವೆಡೆ ದುರಂತಗಳು ನಡೆದಿದ್ದರೂ ಇಲ್ಲಿನವರು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ಸಾರಿಗೆ ಬಸ್ ಘಟಕದ ವಿರುದ್ದ ಕಿಡಿಕಾರಿದ್ದಾರೆ.

Edited By

Manjula M

Reported By

Manjula M

Comments