ವಿಜಯ್ ಮಲ್ಯ ಗಡಿಪಾರು ಕೇಸ್ ಹಿನ್ನಲೆ: ತೀರ್ಪು ಪ್ರಕಟಿಸಿದ ಲಂಡನ್ ನ್ಯಾಯಾಲಯ

11 Dec 2018 11:02 AM | General
381 Report

ಮದ್ಯದ ದೊರೆ ವಿಜಯ್ ಮಲ್ಯ  ಭಾರತದ ಬ್ಯಾಂಕ್ ಗಳಿಗೆ ಸಾಲ ಮರುಪಾವತಿಸದೆ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ವಿಷಯ ಎಲ್ಲರಿಗೂ ಕೂಡ ತಿಳಿದೆ ಇದೆ.. ವಿಜಯ್ ಮಲ್ಯ ಗಡಿಪಾರು ಕುರಿತು ಲಂಡನ್ ಕೋರ್ಟ್ ಸೋಮವಾರ ತೀರ್ಪು ಪ್ರಕಟ ಮಾಡಿದೆ. ಉದ್ಯಮಿ ವಿಜಯ್ ಮಲ್ಯ ಭಾರತದ ಬ್ಯಾಂಕ್ ಗಳಿಂದ ಸಾಲ ಪಡೆದು ಅದನ್ನು ಮರುಪಾವತಿ ಮಾಡದೆ ಲಂಡನ್ ಗೆ ಹೋಗಿ ತಲೆ ಮರೆಸಿಕೊಂಡಿದ್ದರು..

ಮಲ್ಯ ಅವರನ್ನು ಭಾರತಕ್ಕೆ ಕಳುಹಿಸುವಂತೆ  ಭಾರತದ ತನಿಖಾ ಸಂಸ್ಥೆಗಳು ಲಂಡನ್‌ನ ವೆಸ್ಟ್‌ ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದು, ಅದರ ವಿಚಾರಣೆ  ನಡೆಸಿದ ಕೋರ್ಟ್ ಇದೀಗ ತೀರ್ಪನ್ನು ಪ್ರಕಟಿಸಿದ್ದು, ಭಾರತಕ್ಕೆ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ತೀರ್ಪು ನೀಡಲಾಗಿದೆ.. ತೀರ್ಪು ಪ್ರಕಟವಾಗುತ್ತಿದ್ದ ಬೆನ್ನಲೇ ನ್ಯಾಯಾಲಯದ ಗಡಿಪಾರು ತೀರ್ಪುನ್ನು ಪ್ರಶ್ನೆ ಮಾಡಿ ವಿಜಯ್ ಮಲ್ಯ ಲಂಡನ್ ಹೈ ಕೋರ್ಟ್ ಗೆ ಮೇಲ್ನನವಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಪರವಾಗಿ ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗದಿದ್ದರೆ 28 ದಿನಗಳ ಒಳಗೆ ಮಲ್ಯ ಬ್ರಿಟನ್ ತೊರೆಯಬೇಕಾಗಿದೆ ಎಂದು ತಿಳಿದುಬಂದಿದೆ.

Edited By

Manjula M

Reported By

Manjula M

Comments