ಚಾಮುಂಡಿ ತಾಯಿಯ ದರ್ಶನ ಈ ದಿನ ಸ್ಥಗಿತ ..!! ಹೋಗೋ ಫ್ಲ್ಯಾನ್ ಇದ್ರೆ ಕ್ಯಾನ್ಸಲ್ ಮಾಡಿ..!!?

04 Dec 2018 12:40 PM | General
101 Report

ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಚಾಮುಂಡೇಶ್ವರಿ ದೇಗುಲದಲ್ಲಿ ನೌಕರರು ಪ್ರತಿಭಟನೆಗೆ ಮುಂದಾಗಿದ್ದು, ಡಿಸೆಂಬರ್ 14 ರಂದು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕರ್ತವ್ಯ ಸ್ಥಗಿತಗೊಳಿಸಲು ಮುಂದಾಗಿದ್ದಾರೆ  6 ನೇ ವೇತನ ಆಯೋಗದ ನಿಯಮಾನುಸಾರ, ಶೇ. 30 ರಷ್ಟು ವೇತನ ಹೆಚ್ಚಿಸಬೇಕು ಎಂದು ಪಟ್ಟು ಹೇಳಿದ್ದಾರೆ.

ಹೆಚ್ಚುವರಿ ತುಟ್ಟಿಭತ್ಯೆ ಆದಾಗ ಮಂಜೂರು ಮಾಡಿಕೊಳ್ಳಲು ಖಾಯಂ ಆದೇಶ ನೀಡಬೇಕು ಎಂದು ಆಗ್ರಹಿಸಿ ಡಿಸೆಂಬರ್ 14 ರಂದು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬೀಗ ಹಾಕಲು ಶ್ರೀ ಚಾಮುಂಡೇಶ್ವರಿ ದೇಗುಲ ಹಾಗೂ ಸಮೂಹ ದೇವಾಲಯಗಳ ನೌಕರರ ಸಂಘ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶವಿದ್ದರೂ ನಮಗೆ ಬೋನಸ್ ಸಿಕ್ಕಿಲ್ಲ. ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ, ಸುಮಾರು 70 ಕ್ಕೂ ಹೆಚ್ಚು ನೌಕರರನ್ನು ಖಾಯಂ ಮಾಡಿಕೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ನೌಕರರು ಆಕ್ರೋಶ ವ್ಯಕ್ತಪಡಿಸಿದೆ.  ಆದ್ದರರಿಂದ ಡಿಸೆಂಬರ್ 14 ರಂದು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬೀಗ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments