ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ಬಡ್ಡಿ ಇಲ್ಲದೆ ಸಿಕ್ತಿದೆ 10 ಲಕ್ಷ ರೂ ಸಾಲ…!! ಫಲಾನುಭವಿಗಳು ಯಾರು..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

04 Dec 2018 10:05 AM | General
2810 Report

ಈಗಾಗಲೇ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ.. ಇದೀಗ ಮತ್ತೊಮ್ಮೆ  ಸ್ವಸಹಾಯ ಸಂಘಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗು ಎಸ್. ಆರ್ ಶ್ರೀನಿವಾಸ್ ಅವರು ರೂಪಿಸಿರುವ 'ಕಾಯಕ' ಯೋಜನೆಯಡಿ ಸಣ್ಣ ಉದ್ಯಮಗಳನ್ನು ಆರಂಭಿಸುವವರಿಗೆ ರೂ.10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಹಿಳಾ ಸಬಲೀಕರಣ, ಉದ್ಯಮಶೀಲತೆ ಗುಣಮಟ್ಟ ಹೆಚ್ಚಳ, ಕೌಶಲ್ಯ ಅಭಿವೃದ್ಧಿಗಾಗಿ ಕಾಯಕ ಯೋಜನೆ ಜಾರಿ ತರಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಬಜೆಟ್ ನಲ್ಲಿ ಕಾಯಕ ಯೋಜನೆ ಬಗ್ಗೆ ಉಲ್ಲೇಖ ಮಾಡಿದ್ದರು. ಅದರಂತೆ ಕಾಯಕ ಯೋಜನೆಯಡಿ ನೀಡಲಾಗುವ ಸಾಲದ ವಿಶೇಷತೆಯೆಂದರೆ, ಐದು ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. 5 ರಿಂದ 10 ಲಕ್ಷದವರೆಗಿನ ಸಾಲಕ್ಕೆ ಶೇ. 4ರಷ್ಟು ಬಡ್ಡಿದರ ವಿಧಿಸಲಾಗುತ್ತದೆ ಎನ್ನಲಾಗಿದೆ. ಕಾಯಕ ಯೋಜನೆಯಡಿ ಪಡೆಯುವ ಸಾಲದ ನಿಯಮವೆಂದರೆ, ಸ್ವಸಹಾಯ ಬ್ಯಾಂಕುಗಳಲ್ಲಿ ಸಾಲ ಸ್ವೀಕರಿಸಿದರೆ ಮಾತ್ರ ಬಡ್ಡಿರಹಿತವಾಗಿರುತ್ತದೆ. ಹಾಗಾಗಿ ಈ ಪ್ರಯೋಜನವನ್ನು ಎಲ್ಲರೂ ತಿಳಿದುಕೊಂಡು ಸಾಲ ಸೌಲಭ್ಯ ಪಡೆದುಕೊಂಡು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಿ

Edited By

Manjula M

Reported By

Manjula M

Comments