ತಾಯಿ-ತಂಗಿಯನ್ನು ಹತ್ಯೆಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ ವೈದ್ಯ..!

01 Dec 2018 3:07 PM | General
347 Report

ವೈದ್ಯ ನಾರಾಯಣ ಹರಿ…ಅಂತಾರೆ ಆದರೆ ವೈದ್ಯನೊಬ್ಬ ತನ್ನ ತಾಯಿ ಹಾಗೂ ತಂಗಿಗೆ ವಿಷದ ಇಂಜೆಕ್ಷನ್ ನೀಡಿ ತಾನೂ ಕೂಡ ತಾನೂ ಅತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಬೆಂಗಳೂರಿನ ಆರ್ ಆರ್ ನಗರದಲ್ಲಿ ನಡೆದಿದೆ. ಡಾ. ಗೋವಿಂದ ಪ್ರಸಾದ್ ಕೃತ್ಯ ಮಾಡಿದ್ದಾರೆ.. ತಾಯಿ ಮೂಕಾಂಬಿಕಾ (75) ಹಾಗೂ ತಂಗಿ ಶ್ಯಾಮಲಾ (40) ಇಂದು ಮುಂಜಾನೆ 7 ಗಂಟೆ ಸುಮಾರಿಗೆ ವಿಷದ ಇಂಜೆಕ್ಷನ್ ಕೊಟ್ಟು ಹತ್ಯೆ ಮಾಡಿದ್ದಾನೆ.

ತದ ನಂತರ ತಾನೂ ಕೂಡ ವಿಷದ ಇಂಜಕ್ಷನ್ ಚುಚ್ಚಿಕೊಂಡಿದ್ದಾನೆ. ಬಳಿಕ ಗಾಯಾಳು ವೈದ್ಯನನ್ನು ಚಿಕಿತ್ಸೆಗಾಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂದಿಸಿದಂತೆ ಡೆತ್ ನೋಟ್ ಬರೆದಿಟ್ಟು, ಅನಾರೋಗ್ಯದ ಕಾರಣದಿಂದ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿಕೊಂಡು ಸಾಯುತ್ತಿರುವುದಾಗಿ ಬರೆದಿಟ್ಟಿದ್ದಾರೆ. ಡಾ. ಗೋವಿಂದ ಪ್ರಸಾದ್  ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.. ಘಟನಾ ಸ್ಥಳಕ್ಕೆ ಆರ್.ಆರ್. ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Edited By

Manjula M

Reported By

Manjula M

Comments