ಆತ್ಮಹತ್ಯೆಗೆ ಶರಣಾದ ವಿಷಪೂರಿತ ಹಾವು..!! ಹಾಗಾದ್ರೆ ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ತಾವ..!!?

10 Nov 2018 3:33 PM | General
753 Report

ಕೆಲವೊಮ್ಮೆ ಕೆಲವೊಂದು ಘಟನೆಗಳು ನಮ್ಮನ್ನ ಆಶ್ಚರ್ಯ ಪಡುವಂತೆ ಮಾಡುತ್ತದೆ.. ಸಾಮಾನ್ಯವಾಗಿ ಮನುಷ್ಯರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿರುತ್ತೇವೆ.. ಆದರೆ   ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳು ಕೂಡ  ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದರೆ ನೀವು ನಂಬಲೇ ಬೇಕು.. ಅದಕ್ಕೆ ಒಳ್ಳೆಯ ನಿದರ್ಶನ ಇಲ್ಲಿದೆ ಓದಿ.. ಈ ಘಟನೆ ನಡೆದಿರೋದು ಆಸ್ಟ್ರೇಲಿಯಾ ದೇಶದಲ್ಲಿ, ಈ ದೇಶದಲ್ಲಿ  ಕಂಡುಬರುವಂತಹ  ವಿಷಪೂರಿತ ಹಾವು ಎಂದರೆ ಅದು ಟೀ ಬ್ರೌನ್ ಜಾತಿಯ  ಹಾವುಗಳು, ಇವುಗಳು ಕಚ್ಚಿದರೆ ಕ್ಷಣಮಾತ್ರದಲ್ಲಿ ಮನುಷ್ಯನು ಸಾಯ ಬಲ್ಲನು.. ಸ್ನೇಹ ಅಂಟರ್ ಮಾರ್ಕ್ ಎನ್ನುವ ಹಾವು ಹಿಡಿಯುವವನಿಗೆ ಒಂದು ಪೋನ್ ಕಾಲ್  ಬರುತ್ತದೆ.

ನಮ್ಮ ಮನೆಯಲ್ಲಿ ಹಾವು ಮನೆಯಲ್ಲಿ ಸೇರಿಕೊಂಡಿದೆ ಏನು ಮಾಡಿದರೂ ಕೂಡ ಮನೆಯಿಂದ ಹೊರಗಡೆ ಹೋಗುತ್ತಿಲ್ಲ,  ಸತತ ಎರಡು ಗಂಟೆಗಳ ಕಾಲ ಕಾಯುತ್ತಿದ್ದೇವೆ..  ಆದರೂ ಕೂಡ ಹೊರಗಡೆ ಹೋಗುತ್ತಿಲ್ಲ ದಯವಿಟ್ಟು ಅದನ್ನು ಹೊರಗೆ ತೆಗೆದು ಕೊಡಿ ಎಂದು ಒಬ್ಬ ಮಹಿಳೆ ಹಾವು ಹಿಡಿಯುವನಿಗೆ ಹೇಳುತ್ತಾಳೆ..ಈ ವಿಷಯವನ್ನು ತಿಳಿದ ಸ್ನೇಕ್ ಹಂಟರ್ ಮಾರ್ಕ್ ತರಾತುರಿಯಲ್ಲಿ ಆ ಜಾಗಕ್ಕೆ ಬರುತ್ತಾರೆ,  ಹಾವು ಹಿಡಿಯುವವನು ಹಾವನ್ನು ಹೊರಗೆ ತೆಗೆದು ಎಳೆಯುತ್ತಾನೆ.  ತೆಗೆದು ನೋಡಿದಾಗ ಹಾವು ತನ್ನನ್ನು ತಾನೇ ಕಚ್ಚಿಕೊಂಡು ಸತ್ತು ಹೋಗಿರುತ್ತದೆ. ಸಾಮಾನ್ಯವಾಗಿ ಯಾವ ಹಾವುಗಳು ಆತ್ಮಹತ್ಯೆ ಮಾಡಿಕೊಳ್ಳುವುದು ನಾನು ಎಂದು ನೋಡಿದ್ದಿಲ್ಲ,  ಆ ಹಾವು ಆತ್ಮಹತ್ಯೆ ಮಾಡಿಕೊಂಡಿದೆ ಈ ಸತ್ಯವನ್ನು ತಿಳಿದ ನಂತರ ನಾನು ಆಶ್ಚರ್ಯಚಕಿತನಾದೆ ಎಂದು ಹಾವು ಹಿಡಿಯುವ ಮಾರ್ಕ್ ತನ್ನ ಅನುಭವವನ್ನು  ಹಂಚಿಕೊಂಡಿದ್ದಾನೆ.

Edited By

Manjula M

Reported By

Manjula M

Comments