ರಾಜ್ಯ ಸರ್ಕಾರದಿಂದ ಬೀದಿಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್ 

10 Nov 2018 12:53 PM | General
149 Report

ಮೈತ್ರಿ ಸರ್ಕಾರವು 'ಬಡವರ ಬಂಧು' ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದು ಸದ್ಯದಲ್ಲೇ ಸಾರ್ವಜನಿಕರ ಉಪಯೋಗಕ್ಕೆ ದೊರೆಯಲಿದೆ. ಸಹಕಾರ ಸಚಿವರಾದ ಬಂಡೆಪ್ಪ ಕಾಶೆಂಪೂರ್ ಮಾತನಾಡಿ ಇನ್ನು ಮುಂದೆ ಬೀದಿಬದಿ ವ್ಯಾಪಾರಿಗಳಿಗೆ 2 ಸಾವಿರದಿಂದ 10  ಸಾವಿರದವರೆಗೆ ಯಾವುದೇ ಬಡ್ಡಿಯನ್ನು ವಿಧಿಸದೆ ಹಣ ನೀಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.. ಬೀದಿಬದಿಯ ವ್ಯಾಪಾರಿಗಳಿಗೆ ಯಾವುದೇ ದಾಖಲೆಗಳನ್ನು ನೀಡದೆ ಹಣ ನೀಡಲು ಮುಂದಾಗಿದೆ, ಬ್ಯಾಂಕ್ ಗಳ  ಜೊತೆ ಹೊಂದಾಣಿಕೆ ಮಾಡಿಕೊಂಡು ಮೊಬೈಲ್ ಸರ್ವಿಸ್ ವ್ಯಾನ್ ಮೂಲಕ ಲೋನ್ ಕೊಡಲಾಗುವುದು ಎಂದು ಹೇಳಿದರು.

ಮೊದಲ ಹಂತದಲ್ಲಿ 53 ಸಾವಿರ ಜನಗಳಿಗೆ ಸಾಲವನ್ನು ಕೊಡಲು ಮುಂದಾಗಿದೆ. ಈ ಯೋಜನೆಯನ್ನು ಯಾರೆಲ್ಲ ಪಡೆದುಕೊಳ್ಳಬಹುದು ಎಂದರೆ ರಸ್ತೆ ಬದಿಯಲ್ಲಿ ತಳ್ಳುವ ಗಾಡಿ   ಅಥವಾ ಮೋಟಾರು ವಾಹನದಲ್ಲಿ ಪಾನೀಯ, ತಿಂಡಿ, ಸಿಹಿ ಪದಾರ್ಥ ಮಾರುವ ಬೀದಿ ವ್ಯಾಪಾರಿಗಳು, ಮೋಟಾರು ವಾಹನಗಳಲ್ಲಿ ಮನೆ ಮನೆಗಳಿಗೆ  ತರಕಾರಿ ಹಣ್ಣು ಹೂವು ಕಾಯಿ ಮಾರುವವರು ಮತ್ತು ರಸ್ತೆ ಬದಿಯ ಬುಟ್ಟಿವ್ಯಾಪಾರಿಗಳು, ಪಾದರಕ್ಷೆ ರಿಪೇರಿ ಮತ್ತು ಮಾರಾಟ ಇತ್ಯಾದಿ ಮಾರಾಟದಲ್ಲಿ ತೊಡಗಿರುವ ಬೀದಿವ್ಯಾಪಾರಿಗಳು, ಆಟದ ಸಾಮಗ್ರಿಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಈ ಯೋಜನೆಯನ್ನು ಪಡೆದುಕೊಳ್ಳಬಹುದು. 

Edited By

Manjula M

Reported By

Manjula M

Comments