ಬೆಂಗಳೂರಿನಲ್ಲಿ ಟ್ರಾಫಿಕ್ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಮಹಿಳೆಯ ಕೆನ್ನೆಗೆ ಬಾರಿಸಿದ ಯುವಕರು..!

10 Nov 2018 10:04 AM | General
172 Report

ಬೆಂಗಳೂರಿನಂತಹ ಸಿಟಿಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿಯೇ ಇದೆ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಮಹಿಳಾ ಟೆಕ್ಕಿ ಕೆನ್ನೆಗೆ ಹೊಡೆದು ಆಕೆಯ ಬಟ್ಟೆಯನ್ನು ಹರಿದು ಹಾಕಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೈಕೊಂಡ್ರಹಳ್ಳಿಯ ರಸ್ತೆಯ ಮಧ್ಯದಲ್ಲಿ ನಡೆದಿದೆ. ಈ ಘಟನೆ ಅ.5 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಗ್ನಿ ಶಾಮಕ ತುರ್ತು ಸೇವೆಗಳ ವಿಭಾಗದ ಅಧಿಕಾರಿಯ ಮಗನಾದ ಮಂಜುನಾಥ್  ಹಾಗೂ ಆತನ ಸ್ನೇಹಿತ ಮಧು ಸೇರಿಕೊಂಡು 25 ವರ್ಷದ ಟೆಕ್ಕಿ ಮಹಿಳೆಗೆ ಟ್ರಾಫಿಕ್ ಪೊಲೀಸರ ಮುಂದೆಯೇ ಕೆನ್ನೆಗೆ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ,  ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೈಕೊಂಡ್ರಹಳ್ಳಿಯ ರಸ್ತೆಯ ಮಧ್ಯದಲ್ಲಿ ಮಂಜುನಾಥ್ ತಮ್ಮ ಕಾರ್ ನ್ನು ನಿಲ್ಲಿಸಿದ್ದರು. ಇದನ್ನು ಮಹಿಳಾ ಟೆಕ್ಕಿ ಪ್ರಶ್ನೆ ಮಾಡಿದ್ದಾಳೆ... ಈ ಸಮಯದಲ್ಲಿ ಮಂಜುನಾಥ್ ಮತ್ತು ಆತನ ಸ್ನೇಹಿತ ಸೇರಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಹಲ್ಲೆಗೊಳಗಾದ ಮಹಿಳೆ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.

 

Edited By

Manjula M

Reported By

Manjula M

Comments