“ಅವನಿ” ಒಂದು ವಾರದಿಂದ ಆಹಾರವನ್ನೇ  ಸೇವಿಸಿರಲಿಲ್ಲವಂತೆ..!! ಹಾಗಾದ್ರೆ 13 ಜನರನ್ನು ಬಲಿ ತೆಗೆದುಕೊಂಡಿದ್ದು ಸುಳ್ಳಾ..!?

09 Nov 2018 1:36 PM | General
304 Report

ಸಾಮಾನ್ಯವಾಗಿ ಇತ್ತಿಚಿಗಷ್ಟೆ ಗುಂಡೇಟಿಗೆ ಬಲಿಯಾದ ಅವನಿ ಬಗ್ಗೆ ಎಲ್ಲರಿಗೂ ತಿಳಿದೆ ಇದೆ… ಅವನಿ ಎನ್ನುವ ಹೆಣ್ಣು ಹುಲಿಯನ್ನು ನಿರ್ದಾಕ್ಷಿಣ್ಯವಾಗಿ ಅರಣ್ಯ ಇಲಾಖೆಯವರು ಕೊಂದಿದ್ದು ಬಾರಿ ಸುದ್ದಿಯಾಗಿತ್ತು.. ಆದರೆ ಆ ಅವನಿ ಸುಮ್ಮನ್ನೆ ಸಾಯಲಿಲ್ಲ.. 13 ಜನರನ್ನು ಬಲಿ ತೆಗೆದುಕೊಂಡಿದೆ ಎಂಬ ಹಣೆ ಪಟ್ಟಿಯೊಂದಿಗೆ ಸಾವನ್ನಪ್ಪಿತ್ತು.. ಹಾಗಾದ್ರೆ ನಿಜವಾಗಲೂ ಅವನಿ ನರ ಭಕ್ಷಕ ಆಗಿತ್ತಾ..?ಅವನಿ ಸಿಕ್ಕಾ ಸಿಕ್ಕವರನ್ನು ತಿಂದು ಹಾಕುತ್ತಿತ್ತಾ..? ಎಂಬ ಪ್ರಶ್ನೆ ಕಾಡೋದಕ್ಕೆ ಶುರು ಮಾಡಿದೆ.. ಯಾಕೆ ಗೊತ್ತಾ..? ಅವನಿಯ ಮರಣೋತ್ತರ ಪರೀಕ್ಷೆಯಲ್ಲಿ ಇಂದು ವಿಷಯ ಬಯಲಾಗಿದೆ.

13 ಜನರನ್ನು ಕೊಂದಂತಹ ಹಣೆಪಟ್ಟಿಯೊಂದಿಗೆ ಗುಂಡೇಟಿಗೆ ಬಲಿಯಾದ ಅವನಿ ಒಂದು ವಾರದಿಂದ ಏನೂ ತಿಂದಿರಲಿಲ್ಲ ಎಂಬುದು ತಿಳಿದುಬಂದಿದೆ., ಈ ವಿಷಯ ಅವನಿ ಯನ್ನು ಮರಣೋತ್ತರ ಪರೀಕ್ಷೆಗೆ ಒಳ ಪಡಿಸಿದಾಗ ಈ ವಿಚಾರ ಹೊರಬಂದಿದೆ. ಆದರೆ ಅಲ್ಲಿನ ಜನರು ಈ ಹುಲಿಯನ್ನು ನರಭಕ್ಷಕ ಹಾಗೂ ಸಿಕ್ಕ ಸಿಕ್ಕವರನ್ನು ತಿನ್ನುತ್ತದೆ ಎಂದು ಹೇಳುತ್ತಾರೆ. ಆದರೆ ಒಂದು ವಾರದಿಂದ ಈ ಹುಲಿ ಏನೂ ತಿಂದಿಲ್ಲ ಅನ್ನೋದೆ ವಿಪರ್ಯಾಸ..ಅವನಿಯನ್ನು ಕೊಲ್ಲುವ ಒಂದು ವಾರದ ಮುಂಚೆ ಅವನಿ ಏನೂ ತಿಂದಿಲ್ಲ ಎಂದು ಪೋಸ್ಟ್ ಮಾರ್ಟಂ ರಿಪೋರ್ಟ್ ತಿಳಿಸಿದೆ. ಆದರೆ ಇಲ್ಲಿ ಇನ್ನೊಂದು ವಿಚಾರ ಏನ್ ಗೊತ್ತಾ..?  ಅವನಿ ಎಂಬ ಹೆಣ್ಣು ಹುಲಿಗೆ ಎರಡು ಮರಿಗಳಿವೆಯಂತೆ . ಅವನಿ ಒಂದು ವಾರದಿಂದ ಏನೂ ತಿಂದಿಲ್ಲ ಅಂದರೆ ಅವನಿ ಮರಿಗಳೂ ಕೂಡ ಏನೂ ತಿಂದಿಲ್ಲ ಆದರೆ ಇವೆಲ್ಲವನ್ನು ಕಂಡು ಕೊಡುವುದಕ್ಕೆ ಅವಳ ಮರಿಗಳು ಕೈಗೆ ಸಿಕ್ತಾ ಇಲ್ಲ ಹಾಗೆ ಬದುಕಿದೆಯೋ ಸತ್ತಿದೆಯೋ ಅನ್ನುವ ಸುಳಿವು ಕೂಡ ಸಿಗುತ್ತಿಲ್ಲ. ಒಟ್ಟಾರೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅನ್ನೋದು ಈ ಕಥೆಗೆ ಸೂಕ್ತ ಎನಿಸುತ್ತದೆ.

Edited By

Manjula M

Reported By

Manjula M

Comments