ಮುಸ್ಲಿಂ ಮಹಿಳೆಯರಿಗೆ ನೇಲ್‌ ಪಾಲಿಶ್‌ ನಿಷಿದ್ಧ ಎಂದು ಫತ್ವಾ ಹೊರಡಿಸಿದ ದಾರುಲ್‌

05 Nov 2018 12:26 PM | General
409 Report

ವಿಧ ವಿಧವಾದ ಫ‌ತ್ವಾ ಗಳನ್ನು ಹೊಡಿಸುವುದಕ್ಕೆ ಹೆಸರುವಾಸಿಯಾಗಿರುವಂತಹ ದಾರುಲ್‌ ಉಲೂಮ್‌ ದೇವಬಂದ್‌ ಇಸ್ಲಾಮಿಕ್‌ ಸೆಮಿನರಿ, ಇದೀಗ ಮತ್ತೊಂದು ಫತ್ವಾವನ್ನು ಹೊರಡಿಸಿದೆ…ಮುಸ್ಲಿಂ ಮಹಿಳೆಯರು ಉಗುರು ಕತ್ತರಿಸಿಕೊಂಡು ನೇಲ್‌ ಪಾಲಿಶ್‌ ಹಾಕಿಕೊಳ್ಳುವುದನ್ನು ನಿಷೇಧಿಸಿ ಇದೀಗ  ಫ‌ತ್ವಾ ಹೊರಡಿಸಿದೆ. ಮುಸ್ಲಿಂ ಮಹಿಳೆಯರು ತಮ್ಮ ಉಗುರುಗಳಿಗೆ ಮೆಹೆಂದಿ ಹಾಕುವುದನ್ನು  ಮಾತ್ರ  ಆಕ್ಷೇಪಣೆ ಮಾಡಿಲ್ಲ..

ಇಸ್ಮಾಂ ವಿರೋಧಿ ಕೆಲಸಗಳನ್ನು ಯಾರು ಮಾಡಬಾರದು. ಮುಸ್ಲಿಂ ಮಹಿಳೆಯರು ಉಗುರು ಕತ್ತರಿಸಿಕೊಂಡು ನೇಲ್‌ ಪಾಲಿಶ್‌ ಹಾಕಿಕೊಳ್ಳುವುದು ಇಸ್ಲಾಂ ವಿರೋಧಿ ಎಂದು ದಾರುಲ್‌ ಉಲೂಮ್‌ ದೇವಬಂದ್‌ ಹೇಳಿದೆ. ಇದಕ್ಕೆ ಬದಲಾಗಿ ಮುಸ್ಲಿ ಮಹಿಳೆಯರು ತಮ್ಮ ಉಗುರಿನ ಮೇಲೆ ಮೆಹೆಂದಿ ಹಾಕಬಹುದಾಗಿ ಎಂದು ಸ್ಪಷ್ಟಪಡಿಸಿದೆ.ದಾರುಲ್‌ ಉಲೂಮ್‌ ದೇವಬಂದ್‌ ನ ಸದಸ್ಯರಾಗಿರುವ ಮುಫ್ತಿ ಇಶ್ರಾರ್‌ ಗೌರಾ ಈ ಹೊಸ ಫ‌ತ್ವಾದ ವಿವರವನ್ನು ನೀಡಿದ್ದಾರೆ. ಕಳೆದ ವರ್ಷ ಇದೇ ಸೆಮಿನರಿ ಮುಸ್ಲಿಂ ಮಹಿಳೆಯರು ತಮ್ಮ ಹುಬ್ಬಿನ ಕೂದಲನ್ನು ಕೀಳುವುದು, ಕತ್ತರಿಸಿಕೊಳ್ಳುವುದು, ಶೇಪ್‌ ಮಾಡಿಕೊಳ್ಳುವುದು ಮತ್ತು ತಲೆಕೂದಲು ಕತ್ತರಿಸಿಕೊಳ್ಳುವುದು ಇಸ್ಲಾಂ ವಿರೋಧಿ ಎಂದು ಹೇಳಿ ಇವನ್ನು ನಿಷೇಧಿಸಿ ಫ‌ತ್ವಾ ಹೊರಡಿಸಿತ್ತು. ಇದೀಗ ನೇಲ್ ಪಾಲಿಶ್ ಹಾಕಿಕೊಳ್ಳುವುದನ್ನು ನಿಷೇಧಿಸಿದೆ.

Edited By

Manjula M

Reported By

Manjula M

Comments

Cancel
Done