ರಾಜ್ಯ ಸರ್ಕಾರದಿಂದ  ರಾಜ್ಯದ ಜನತೆಗೆ "ದೀಪಾವಳಿ ಗಿಫ್ಟ್ ' ..! ನಿಮಗೆ ಸಿಗಲಿದೆ ಸಾಲ ಸೌಲಭ್ಯ..!! ಫಲಾನುಭವಿಗಳು ಯಾರು..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..

05 Nov 2018 10:22 AM | General
1317 Report

ರಾಜ್ಯ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.. ಆದರೆ ಇದೀಗ ಸಣ್ಣ ವ್ಯಾಪಾರಿಗಳು ಮತ್ತು ಬೀದಿಬದಿಯ ವ್ಯಾಪಾರಿಗಳಿಗೆ ನೆರವಾಗಲು ರಾಜ್ಯ ಸರ್ಕಾರವು 'ಬಡವರ ಬಂಧು' ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಸಂಬಂಧ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರು ಈಗಾಗಲೇ ಅಧಿಕಾರಿಗಳ ಜೊತೆಗೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಲೇವಾದೇವಿದಾರರಿಂದ ಬೆಳಗ್ಗೆ ಹಣ ಪಡೆದು ಸಂಜೆ ಪಾವತಿಸುತ್ತಿರುವ ಸಣ್ಣ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದಿಂದಲೇ ದಿನ  ದುಡಿಮೆ ಬಂಡವಾಳ ಒದಗಿಸುವ ಮಹತ್ವಾಕಾಂಕ್ಷಿಯ ಯೋಜನೆ ಇದಾಗಿದೆ. ಮೀಟರ್ ಬಡ್ಡಿ ದಂಧೆಗೆ ಸಿಲುಕಿ ಸಂತ್ರಸ್ತರಾಗಿರುವ ಕೆಳವರ್ಗದ ಜನರಿಗೆ ರಕ್ಷಣೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಪೊಲೀಸ್ ಭದ್ರತೆ ಹಾಗೂ ಸೇಫ್ ಲಾಕರ್ ಸಹಿತ ಮೊಬೈಲ್ ವ್ಯಾನ್ ಗಳು ಮಾರುಕಟ್ಟೆ ಪ್ರದೇಶದಲ್ಲಿ ಬೆಳಗಿನ ಜಾವ 4 ಗಂಟೆಗೆ ಬಂದು ನಿಲ್ಲಲಿವೆ. ಇಲ್ಲಿ ಸಣ್ಣ ವ್ಯಾಪಾರಿಗಳಿಗೆ ಆಧಾರ್ ಕಾರ್ಡ್ ನಷ್ಟೇ ಭದ್ರತೆಯಾಗಿ ಪಡೆದು ಸಾಲ ಕೊಡಲಾಗುವುದು ಎಂದು ತಿಳಿಸಿದ್ದಾರೆ. ಕನಿಷ್ಠ 1 ಸಾವಿರ ರೂ.ಗಳಿಂದ ಗರಿಷ್ಠ 5 ಸಾವಿರ ರೂ. ಗಳ ಸಾಲ ದೊರೆಯುಲಿದೆ. ದಿನದ ವ್ಯಾಪಾರ ಮುಗಿದ ಬಳಿಕ ಅದೇ ಸ್ಥಳಕ್ಕೆ ಬಂದು ಸಾಲ ಮರಳಿಸಬೇಕು. ಪ್ರತಿ ಸಾವಿರಕ್ಕೆ 10 ರೂ. ನಿರ್ವಹಣಾ ವೆಚ್ಚ ಇರಲಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.

 

 

Edited By

Manjula M

Reported By

Manjula M

Comments