ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಬಾಲಕನೇ ಗುರುವಂತೆ..!

01 Nov 2018 2:08 PM | General
381 Report

ಇಂಜಿನಿಯರಿಂಗ್ ಕೆಲಸ  ಅಂದರೆ ಸಾಕು …ಅಯ್ಯೋ ಕಷ್ಟ ಯಾರಪ್ಪ ಇಂಜಿನಿಯರಿಂಗ್ ಓದ್ತಾರೆ ಅಂತೀರಾ… ಇಂಜಿನಿಯರಿಂಗ್ ಪಾಸ್ ಮಾಡೋದೆ ಒಂದು ದೊಡ್ಡ ತಲೆ ನೋವು ಅಂತಾರೆ…ಆದರೆ ತೆಲಂಗಾಣದಲ್ಲಿ ಮೊಹಮ್ಮದ್​​ ಹಸನ್ ಅಲಿ​​​ ಎಂಬ ಏಳನೇ ತರಗತಿ ವಿದ್ಯಾರ್ಥಿ ಇಂಜಿನಿಯರ್ಸ್​​ಗೆ ಪಾಠ ಮಾಡುತ್ತಿದ್ದಾನೆ... ವಿಚಿತ್ರ ಅನ್ನಿಸಿದ್ರೂ  ಕೂಡ ಇದು ನಿಜನೇ… ಇಂಜಿನಿಯರಿಂಗ್​ ಕ್ವಾಲಿಫಿಕೇಶನ್​ ಇದ್ರೂ ವಿದೇಶಕ್ಕೆ ಹೋಗಿ ಸಾಮಾನ್ಯವಾಗಿ ಕೆಲಸ ಮಾಡ್ತಾ ಇರೋ ಭಾರತೀಯರನ್ನ ಕಂಡು ಈ ಬಾಲಕನ ಹೃದಯ ಮಿಡಿದಿದೆ. ಹಾಗಾಗಿ ಈತ ಇಂಜಿನಿಯರ್ಸ್ ಗೆ ಪಾಠ ಮಾಡುತ್ತಿದ್ದಾನೆ..

ಈ ಬಾಲಕ ಭಾರತೀಯರು ಯಾವುದರಲ್ಲಿ ಹಿಂದುಳಿದಿದ್ದಾರೆ ಅನ್ನೋದನ್ನ ಮೊದಲು ತಿಳಿದುಕೊಂಡು ಇಂಟೆರ್​ನೆಟ್‌ನಲ್ಲಿ ಡಿಸೈನಿಂಗ್​ ಮತ್ತು ಡ್ರಾಫ್ಟಿಂಗ್​ ಕಲಿತುಕೊಂಡು , ಇದೀಗ ಸಿವಿಲ್​​, ಮೆಕಾನಿಕಲ್​​ ಮತ್ತು ಎಲೆಕ್ಟ್ರಿಕಲ್​​ ಇಂಜಿನಿಯರ್ಸ್​ ಅಭ್ಯರ್ಥಿಗಳಿಗೆ ಕೋಚಿಂಗ್​ ನೀಡುತ್ತಿದ್ದಾನೆ. ಹಸನ್​​ ನಿತ್ಯವು ಸ್ಕೂಲ್​ನಿಂದ ಬಂದು ಹೋಮ್​ವರ್ಕ್​ ಮುಗಿಸಿ ನಂತರ ಕೋಚಿಂಗ್​ ನೀಡೋದಕ್ಕೆ ಹೋಗುತ್ತಾನೆ…ಇನ್ನೂ ಹಸನ್​​​ ಒಂದು ವರ್ಷದಿಂದ ಕೋಚಿಂಗ್​ ನೀಡುತ್ತಿದ್ದು ಈತನ ಬಳಿ ಪೋಸ್ಟ್​​​ ಗ್ರಾಜುವೇಷನ್​​ ವಿದ್ಯಾರ್ಥಿಗಳು ಕೂಡ ಕೋಚಿಂಗ್​ ಪಡೆಯುತ್ತಿದ್ದರು..ಈ ಪುಟ್ಟ ಬಾಲಕನ ಸಾಧನೆ ನಿಜಕ್ಕೂ ಮೆಚ್ಚುವಂತ್ತದ್ದು..

Edited By

Manjula M

Reported By

Manjula M

Comments