ಹೆಲಿಕಾಪ್ಟರ್​​ನಲ್ಲಿ ಬಂದು ಮೀನು ಖರೀದಿ ಮಾಡಿದ್ರು..!? ವಿಡಿಯೋ ವೈರಲ್

31 Oct 2018 1:45 PM | General
322 Report

ಹೆಲಿಕಾಪ್ಟರ್ ಮೂಲಕ ಬಂದ ಇಂಡಿಯನ್​ ಕೋಸ್ಟ್​ ಗಾರ್ಡ್​ ಅಧಿಕಾರಿಗಳು ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಸ್​ ಆಗುತ್ತಿದ್ದ ಬೋಟ್​​ವೊಂದರಿಂದ ಮೇಲಿಂದಲೇ ಮೀನು ಖರೀದಿ ಮಾಡಿರುವ ಘಟನೆ ನಡೆದಿದೆ. ಇದೀಗ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಕರ್ನಾಟಕ ಮತ್ತು ಗೋವಾ ಗಡಿ ಭಾಗದಲ್ಲಿ ಸಮುದ್ರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಕೋಸ್ಟ್ ಗಾರ್ಡ್ ಪಡೆಯ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಬಂದು ಮೀನುಗಾರಿಕೆ ಮುಗಿಸಿ ವಾಪಸ್​​ ಆಗುತ್ತಿದ್ದ ಮೀನುಗಾರರ ಬಳಿ ಮೀನು ಬೇಕಾಗಿರುವ ಬಗ್ಗೆ ಕೇಳಿದ್ದಾರೆ ಎನ್ನಲಾಗಿದೆ. ಬಳಿಕ ಹೆಲಿಕಾಪ್ಟರ್ ಮೇಲಿಂದಲೇ ಹಗ್ಗದ ಮೂಲಕ ಕವರ್ ಬಿಟ್ಟು ಬೋಟ್​​ನವರಿಂದ ಮೀನು ಪಡೆದುಕೊಂಡಿದ್ದಾರೆ.ಬಳಿಕ ಅಲ್ಲಿಂದ ಹೆಲಿಕಾಪ್ಟರ್ ತೆರಳುತ್ತಿರುವುದು ವಿಡಿಯೋದಲ್ಲಿದೆ. ಇದನ್ನು ಮತ್ತೊಂದು ಬೋಟ್​​​ನಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

Edited By

Manjula M

Reported By

Manjula M

Comments