ವಿದ್ಯಾರ್ಥಿನಿ ಕುಕೀಸ್ ತಯಾರಿಸಿದ್ದು ಯಾವುದರಿಂದ ಅನ್ನೋದು ಗೊತ್ತಾ..? ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಾ..!?

22 Oct 2018 1:00 PM | General
1269 Report

ಕುಕೀಸ್‌ಗಳನ್ನು ಸಾಮಾನ್ಯವಾಗಿ ಯಾವುದರಿಂದ ತಯಾರು ಮಾಡ್ತಾರೆ ಹೇಳಿ..  ಗೋಧಿ ಹಿಟ್ಟಿನಿಂದ ಇಲ್ಲವಾದಲ್ಲಿ ಮೈದಾ ಹಿಟ್ಟಿನಿಂದ ತಯಾರಿಸುತ್ತಾರೆ. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾದ ಹೈಸ್ಕೂಲ್‌ ವಿದ್ಯಾರ್ಥಿನಿ ಒಬ್ಬಳು ಅಜ್ಜಿಯ ಚಿತಾಭಸ್ಮದಿಂದ ಕುಕೀಸ್ ತಯಾರಿಸಿದ್ದಾಳೆ.

ವಿದ್ಯಾರ್ಥಿನಿ ತನ್ನ ಸ್ನೇಹಿತೆಯರಿಗಾಗಿ ಮನೆಯಲ್ಲಿ ಕುಕೀಸ್ ತಯಾರಿಸಲು ಮುಂದಾಗಿದ್ದಾಳೆ... ಆ ಸಮಯದಲ್ಲಿ ಗೋಧಿ ಹಿಟ್ಟು ಖಾಲಿಯಾಗಿರುವುದರಿಂದ ಆಕೆ ಮನೆಯಲ್ಲಿಟ್ಟಿದ್ದ ಅಜ್ಜಿಯ ಚಿತಾ ಭಸ್ಮದಿಂದ ಕುಕೀಸ್ ಮಾಡಿದ್ದಾಳೆ...  ಮಾಡಿದ ಕುಕ್ಕಿಸ್ ಅನ್ನು ತೆಗೆದುಕೊಂಡು ಹೋಗಿ ತನ್ನ ಸ್ನೇಹಿತೆಯರಿಗೆ ನೀಡಿದ್ದಾಳೆ. ಅದನ್ನು ಹೇಗೆ ತಯಾರಿಸಿದೆ ಎಂದು ಸ್ನೇಹಿತರು ಕೇಳಿದಾಗ ತನ್ನ ಅಜ್ಜಿಯ ಭಸ್ಮವನ್ನು ಸಕ್ಕರೆಯ ಜೊತೆ ಬೆರೆಸಿ ಕುಕೀಸ್‌ಗಳನ್ನು ತಯಾರಿಸಿದ್ದಾಗಿ ಹೇಳಿದ್ದಾಳಂತೆ. ಈ ಮಾತನ್ನು ಕೇಳಿ ಸ್ನೇಹಿತೆಯರು ಶಾಕ್ ಆಗಿದ್ದಾರೆ, ಸದ್ಯ ಕುಕೀಸ್‌ ತಿಂದವರಿಗೆ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

Edited By

Manjula M

Reported By

Manjula M

Comments

Cancel
Done