ನೀವು ಸರ್ಕಾರಿ ಕೆಲಸದಲ್ಲಿದ್ದೀರಾ..? ಹಾಗಾದ್ರೆ ಸಿಕ್ತು ಅನ್ಕೊಳ್ಳಿ ರಾಜ್ಯ ಸರ್ಕಾರದಿಂದ ಬಂಫರ್ ಆಫರ್..!!

13 Oct 2018 10:49 AM | General
1215 Report

ಸರ್ಕಾರಿ ನೌಕರರಿಗೆ ದಸರಾ ಉಡುಗೊರೆಯನ್ನು ರಾಜ್ಯ ಸರ್ಕಾರವು ಘೋಷಸಿದ್ದು, ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ದರವನ್ನು ಮೂಲ ವೇತನದ ಶೇ.1.75ರಿಂದ ಶೇ.3.75ಕ್ಕೆ ಹೆಚ್ಚಳ ಮಾಡಿ ಮಂಜೂರು ಮಾಡಲು ರಾಜ್ಯ ಸರ್ಕಾರ  ಈಗಾಗಲೇ ಆದೇಶವನ್ನು ಹೊರಡಿಸಿದೆ.

ನಿವೃತ್ತಿ ವೇತನದಾರರು, ಸರ್ಕಾರದ ನೌಕರರು, ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರಿಗೆ ಅನ್ವಯವಾಗುವಂತೆ ಸದ್ಯಕ್ಕೆ ಇರುವ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. 2006ರ ಪರಿಷ್ಕೃತ ಯುಜಿಸಿ, ಐಸಿಎಆರ್‌ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ಹಾಗೂ 2016ರ ಜ.1ರ ಪೂರ್ವದಲ್ಲಿ ನಿವೃತ್ತರಾದ ಪಿಂಚಣಿದಾರರಿಗೆ ಕೂಡ ಈ ಸೌಲಭ್ಯ ಅನ್ವಯವಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Edited By

Manjula M

Reported By

Manjula M

Comments