ದೇವ್ರೆ.. ಈತ 60 ವರ್ಷಗಳಿಂದ ಸ್ನಾನವೇ ಮಾಡಿಲ್ವಂತೆ..!! ಈತ ತಿನ್ನೋದನ್ನ ಕೇಳುದ್ರೆ ಶಾಕ್ ಆಗ್ತಿರಾ..?

12 Oct 2018 12:43 PM | General
257 Report

ಎಷ್ಟೊತ್ತಿಗೆ ಸ್ನಾನ ಮಾಡಿ ಪ್ರೆಶ್ ಆಗ್ತಿವೋ ಅನಿಸುತ್ತಿರುತ್ತದೆ..  ಒಂದು ದಿನ ಸ್ನಾನ ಮಾಡದೆ ಹಾಗೆ ಇದ್ರೆ ಆ ದಿನ ಲವಲವಿಕೆಯೇ ಇರಲ್ಲ. ಆದರೆ 60 ವರ್ಷಗಳಿಂದ ಇಲ್ಲೊಬ್ಬ ಮನುಷ್ಯ ಸ್ನಾನವೇ ಮಾಡಿಲ್ಲ ಅಂದ್ರೆ ನೀವು ನಂಬುತ್ತೀರಾ…  ಇರಾನ್ ದೇಶದ ಈ ಎಮೋ ಬರೋಬ್ಬರಿ 60 ವರ್ಷಗಳಿಂದ ಸ್ನಾನವೇ ಮಾಡದ ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾನೆ.

ಈಗ  ಈತನ ವಯಸ್ಸಯ 81. ಈತನಿಗೆ ಯಾಕಪ್ಪಾ ನೀನು ಇಷ್ಟು ವರ್ಷ ಸ್ನಾನ ಮಾಡಿಲ್ಲ ಅಂತ ಒಂದು ವೇಳೆ ಕೇಳಿದ್ರೆ, ಸ್ನಾನ ಮಾಡಿದ್ರೆ ಆರೋಗ್ಯ ಹಾಳಾಗುತ್ತೆ ಅಂದುಬಿಡೋದಾ.. ಇರಾನ್ ನ ಹೈವೆ ರಸ್ತೆ ಬದಿಯಲ್ಲಿ ವಾಸಿಸುವ ಈತ ತಿನ್ನೋದು ಸತ್ತ, ಕೊಳೆತ ಪ್ರಾಣಿಗಳ ಹಸಿ ಮಾಂಸ. ರಸ್ತೆಯಲ್ಲಿ ವಾಹನಗಳ ಚಕ್ರಕ್ಕೆ ಸಿಲುಕಿ ಸತ್ತ ಪ್ರಾಣಿಗಳ ಮಾಂಸವೇ ಈತನ ನಿತ್ಯ ಆಹಾರವಂತೆ.. ದೇವ್ರೆ ಈ ಥರಾ ಮನುಷ್ಯರು ಇರ್ತಾರ..? ಅಷ್ಟೆ ಅಲ್ಲ ಈತನಿಗೆ ಸಿಗರೇಟ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಜನರ ಬಳಿ ಸಿಗರೇಟ್ ಕೇಳಿ ಸೇದುವ ಈತನಿಗೆ ಕೆಲವೊಮ್ಮ ಸಿಗರೇಟ್ ಸಿಗೋದು ಕಷ್ಟ. ಈ ವೇಳೆ ಈ ಎಮೋ ಹಾಜಿ ಮಾಡೋದು ಇನ್ನೂ ವಿಚಿತ್ರ. ಈತ ದನ, ಕುದುರೆ, ಒಂಟೆಯ ಒಣಗಿದ ಸೆಗಣಿಯನ್ನೇ ಪುಡಿ ಮಾಡಿ ಸಿಗರೇಟಿನ ರೀತಿ ಮಾಡಿಕೊಂಡು ಸೇದುತ್ತಾನಂತೆ. ಎಷ್ಟೆಲ್ಲಾ ಮಾಡಿದ್ರೂ ಇನ್ನೂ ಆರೋಗ್ಯಕರವಾಗಿ ಓಡಾಡಿಕೊಂಡು ಇದ್ದಾನಲ್ಲ ಅನ್ನೋದೆ ಆಶ್ಚರ್ಯ..

Edited By

Manjula M

Reported By

Manjula M

Comments