ಕಪ್ಪುದಾರವನ್ನು ಕಟ್ಟಿಕೊಳ್ಳುವುದು ಏಕೆ ಅಂತಾ ಗೊತ್ತಾ..?

11 Oct 2018 2:34 PM | General
120 Report

ದಾರ ಒಂದೇ ಸಾಕು. ದೃಷ್ಠಿ ತಾಕದಿರಲಿ ಎನ್ನುವ ಕಾರಣಕ್ಕೆ ಈ ಕಪ್ಪು ದಾರವನ್ನ ಬಳಸಲಾಗುತ್ತದೆ. ಸಾಮಾನ್ಯವಾಗಿ ಕೆಲವು ಜನರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ.. ಅದು ಏಕೆ? ಕಪ್ಪು ದಾರವನ್ನು ಕಟ್ಟಿಕೊಂಡರೇ ಏನೆಲ್ಲಾ ಉಪಯೋಗಗಳಿವೆ ತಿಳಿದುಕೊಳ್ಳೋಣ

ಮನುಷ್ಯನಿಗೆ ದೃಷ್ಟಿ ಬಿದ್ದರೆ ಯಶಸ್ಸಿನಿಂದ ಪಾತಾಳಕ್ಕೆ ಇಳಿದು ಬಿಡುತ್ತಾನೆ ಎಂಬುದು ಹಿರಿಯರ ಮಾತು. ಅದಕ್ಕಾಗಿ ಕೆಟ್ಟ ದೃಷ್ಟಿ ಗಳು ಬೀಳಬಾರದೆಂದು ಹಲವಾರು ರೀತಿಯ ನಂಬಿಕೆಗಳನ್ನು ರೂಡಿಸಿಕೊಂಡಿದ್ದರು. ಮೆಣಸಿನ ಕಾಯಿಯಲ್ಲಿ ದೃಷ್ಟಿ ತೆಗೆಯುವುದು. ಕುಂಕುಮದ ನೀರು, ಬರಲು, ಇದ್ದಿಲು, ಮೊಟ್ಟೆ ಇತ್ಯಾದಿಗಳಿಂದ ದೃಷ್ಟಿ ತೆಗೆಯುತ್ತಿದ್ದರು. ಆದ್ರೆ ಇದು ಈಗ ಅದೆಷ್ಟೋ ಮಂದಿಗೆ ಗೊತ್ತೇ ಇಲ್ಲ. ಯಾಕಂದ್ರೆ ಆಧುನಿಕ ಜೀವನ ನಡೆಸುತ್ತಿರುವ ನಮ್ಮ ಜನಕ್ಕೆ ಹಿಂದಿನ ಕಾಲದ್ದೆಲ್ಲಾ ಹೇಗೆ ತಿಳಿಯುತ್ತದೆ ಅಲ್ವಾ..? ಅದಕ್ಕಾಗೆ ಹೇಳ್ತಿರೋದು ಫ್ಯಾಷನ್ ಗಾಗಿ ಕಟ್ಟುತ್ತಿರುವ ಕಪ್ಪು ದಾರದ ಉಪಯೋಗ ಏನು ಅಂತ. ಹಿಂದೆ ಕಪ್ಪು ದಾರ ಕಟ್ಟಿಕೊಳ್ಳುವುದು ಕೂಡ ಅಭ್ಯಾಸವಿತ್ತು. ಕಪ್ಪು ದಾರ ಕಟ್ಟಿಕೊಂಡರೇ ಹಲವಾರು ಉಪಯೋಗಗಳಿವೆ. ಕಪ್ಪು ದಾರವನ್ನು ಕೈಗೆ, ಕತ್ತಿಗೆ ಅಥವಾ ಕಾಲಿಗೆ, ಅಥವಾ ಸೊಂಟಕ್ಕೆ ಕಟ್ಟಿಕೊಳ್ಳಬಹುದು. ಕಪ್ಪು ದಾರ ಮನುಷ್ಯನ ಮೇಲೆ ಬೀಳುವ ಕೆಟ್ಟ ದೃಷ್ಟಿಯನ್ನು ತಡೆಯುವ ಶಕ್ತಿಯುಳ್ಳದ್ದು.ಹಾಗಾಗಿ ನೀವು ಕೂಡ ಕಪ್ಪು ದಾರವನ್ನು ಕಟ್ಟಿಕೊಳ್ಳಿ..

Edited By

Manjula M

Reported By

Manjula M

Comments