ಬದುಕಿರುವವನ ದೇಹದಿಂದಲೆ ಹೊರಬಂದ ಆತ್ಮ..!!ವಿಡಿಯೋ ವೈರಲ್

11 Oct 2018 1:45 PM | General
111 Report

ದೆವ್ವ, ಭೂತ ಪ್ರೇತ ಇದೆಲ್ಲಾ ಮೂಡನಂಬಿಕೆ.. ದೇಹದೊಳಗೆ ದೆವ್ವ ಬರುತ್ತೆ.. ಆತ್ಮ ಹೊರಗೆ ಹೋಗುತ್ತೆ ಇಂತಹ ವಿಷಯಗಳನ್ನು ಕೇಳ್ತಾನೆ ಇರುತ್ತೇವೆ. ಆದರೆ ಆ ಪ್ರೇತವೇ ದೇಹದಿಂದ ಹೊರಗೆ ಹೋಗುವ ಲೈವ್ ವಿಡಿಯೋ ನೋಡಿರುವುದಿಲ್ಲ ಅಲ್ವ..  ಅಂತಹ ವಿಚಿತ್ರ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯಲ್ಲಿ ಬರ್ತ್ ಡೇ ಪಾರ್ಟಿ ಮಾಡಿ ಡ್ಯಾನ್ಸ್ ಮಾಡುತ್ತಿದ್ದ ಸಮಯದಲ್ಲಿ ಪ್ರತಾಪ್ ಎಂಬ ಯುವಕನ ದೇಹದಿಂದ ಪ್ರೇತ ಹೊರಬಂದಿದೆ. ಪ್ರತಾಪ್ ಎಂಬ ಯುವಕನ ದೇಹದಿಂದ ಪ್ರೇತ ಹೊರ ಹೋಗುತ್ತಿರುವುದನ್ನು ಪಾರ್ಟಿಗೆ ಬಂದಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಪ್ರತಾಪ್ ದೇಹದಿಂದ ಪ್ರೇತ ಹೊರಗೆ ಬಂದ ಬಳಿಕ ವಿಚಿತ್ರ ಎಂಬಂತೆ ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಯುವಕ ಪ್ರತಾಪ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ವಿಡಿಯೋದಲ್ಲಿ ಪ್ರತಾಪ್ ದೇಹದಿಂದ ಪ್ರೇತ ಹೊರಹೋಗುತ್ತಿರುವುದನ್ನು ಗಮನಿಸಿದ ಸ್ನೇಹಿತರು ಶಾಕ್ ಆಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Edited By

Manjula M

Reported By

Manjula M

Comments