ಜ್ಯೋತಿಷಿಯ ಮಾತು ಕೇಳಿ ತಡವಾಗಿ ಬಸ್ ಚಲಾಯಿಸಿದ ಬಸ್ ಚಾಲಕ..! ಮುಂದೇನಾಯ್ತು..!?

09 Oct 2018 1:49 PM | General
803 Report

ಜ್ಯೋತಿಷಿಗಳ ಮಾತನ್ನು ಕೆಲವರು ತುಂಬಾ ನಂಬುತ್ತಾರೆ.. ರಾಹುಕಾಲ ಆ ಕಾಲ ಈ ಕಾಲ ಅಂತ ತುಂಬಾ ನಂಬುತ್ತಾರೆ. ಕೆಲವೊಮ್ಮೆ ಅದರಿಂದಲೇ ಎಡವಟ್ಟು ಹಾಗೋಗುತ್ತೆ.. ಚಾಲಕನೊಬ್ಬ ಜ್ಯೋತಿಷಿಯ ಮಾತು ಕೇಳಿ ಒಂದೂವರೆ ಗಂಟೆ ತಡವಾಗಿ ಬಸ್ ಚಲಾಯಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದೀಗ ಆ ಚಾಲಕನಿಗೆ ನೋಟಿಸ್ ನೀಡಿದ್ದಾರೆ.

ಮೆಜೆಸ್ಟಿಕ್ ನಿಂದ ಚನ್ನಮ್ಮ ಕೆರೆ ಅಚ್ಚುಕಟ್ಟೆ ಪ್ರದೇಶಕ್ಕೆ ತೆರಳಬೇಕಾಗಿದ್ದ ಪೂರ್ಣಪ್ರಜ್ಞ ಲೇಔಟ್ ಡಿಪೋ ಬಸ್ ಚಾಲಕ ಯೋಗಿಶ್ ಈ ರೀತಿ ಅವಾಂತರ ಮಾಡಿಕೊಂಡ ಚಾಲಕ. ಜ್ಯೋತಿಷಿಯನ್ನು ಕೇಳಿದಾಗ ಅವರು ರಾಹುಕಾಲ ಎಂದಿದ್ದಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡದೆ ಒಂದು ಗಂಟೆ 30 ನಿಮಿಷ ತಡವಾಗಿ ಚಲಾಯಿಸಿದ್ದಾನೆ. ಈ ವಿಷಯಕ್ಕಾಗಿ ಚಾಲಕ ಹಿರಿಯ ಅಧಿಕಾರಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಸಂಸ್ಥೆಗೆ ನಷ್ಟ, ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಡಿಪೋ ಮ್ಯಾನೇಜರ್ ಚಾಲಕ ಯೋಗಿಶ್ ಗೆ ನೋಟಿಸ್ ನೀಡಿದ್ದಾರೆ. ಏನೇ ಆದರೂ ಈ ಕಲಿಯುಗದಲ್ಲೂ ಜ್ಯೋತಿಷಿ ನಂಬುದ್ರೆ ಹೀಗೆ ಆಗೋದು ಅಲ್ವ..

Edited By

Manjula M

Reported By

Manjula M

Comments