ಮಂಗನ ಕೈಗೆ  ಬಸ್ ಸ್ಟೇರಿಂಗ್ ಕೊಟ್ಟು ಮನೆ ಸೇರಿದ ಬಸ್ ಚಾಲಕ..! ವಿಡಿಯೋ ವೈರಲ್

06 Oct 2018 11:28 AM | General
1036 Report

ಕೆಲವೊಂದು ಪ್ರಾಣಿಗಳಿಗೆ ಮನುಷ್ಯರು ಮಾಡುವ ಕೆಲಸಗಳನ್ನು ಮಾಡಲು ಇಷ್ಟ.. ಅದರಲ್ಲೂ ಮಂಗನ ಕೆಲಸವನ್ನು ನೋಡಿದರೆ ಸಾಕು ಸಾಕಾಗಿ ಬಿಡುತ್ತದೆ. ಅಂತಹುದರಲ್ಲಿ ಮಂಗ ಬಸ್ ಓಡಿಸಿದರೆ ಹೇಗಿರುತ್ತೆ ಎಂದು ನೀವೆ ಊಹೆ ಮಾಡಿಕೊಳ್ಳಿ.. ದಾವಣಗೆರೆ ಡಿಪೋಗೆ ಸೇರಿದ ಬಸ್​ವೊಂದರಲ್ಲಿ ಚಾಲಕನ ಜೊತೆ ಕೂತ ಕೋತಿ ಬಸ್ ಚಾಲನೆ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.  

ಭರಮಸಾಗರ ಆಲಿಕಲ್ಲುಗೆ ತೆರಳುವ ಮಾರ್ಗದಲ್ಲಿ ಅ.1ರಂದು ಈ ಘಟನೆಯು ಸಂಭವಿಸಿದ್ದು, ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ, ವಿಡಿಯೋ ವೈರಲ್​ ಆಗುತ್ತಿದ್ದಂತೆ ಕೆಎಸ್​ಆರ್​ಟಿಸಿ ಬಸ್​ ಚಾಲಕನ ವಿರುದ್ಧ ಕ್ರಮ ಜರುಗಿಸಿ ಆತನನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Edited By

Manjula M

Reported By

Manjula M

Comments