11ನೇ ಬಾರಿಯೂ ಮೊದಲ ಸ್ಥಾನ : ದೇಶದ ಮೊದಲ ಸಿರಿವಂತ ಮುಕೇಶ್ ಅಂಬಾನಿ.. !

05 Oct 2018 11:39 AM | General
277 Report

ದೇಶದ 100 ಸಿರಿವಂತರ ಪಟ್ಟಿಯನ್ನು  ಫೋರ್ಬ್ಸ್‌ ನಿಯತಕಾಲಿಕೆಯು ಬಿಡುಗಡೆ ಮಾಡಿದೆ. 2018ರ ಭಾರತದ ರಿಲಯನ್ಸ್ ಸಮೂಹದ ಮುಕೇಶ್‌ ಅಂಬಾನಿ 11ನೇ ಬಾರಿಯೂ ಮೊದಲ ಸ್ಥಾನವನ್ನೆ ಗಿಟ್ಟಿಸಿಕೊಂಡಿದ್ದಾರೆ.

ಮುಕೇಶ್‌ ಅಂಬಾನಿ ಅವರು ಒಟ್ಟಾರೆ  3.45 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಈ ವರ್ಷ ಸಂಪತ್ತು ಮೌಲ್ಯದಲ್ಲಿ ಗರಿಷ್ಠ ಗಳಿಕೆಯನ್ನೂ ಅವರು ಸಾಧಿಸಿದ್ದಾರೆ.  67,890 ಕೋಟಿಯಷ್ಟು ಹೆಚ್ಚಾಗಿದೆ.ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಎರಡನೇ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಅವರ ಆಸ್ತಿ ಮೌಲ್ಯ  1.53 ಲಕ್ಷ ಕೋಟಿಗಳಷ್ಟಿದೆ. ಆರ್ಸೆಲರ್‌ ಮಿತ್ತಲ್‌ ಅಧ್ಯಕ್ಷ ಲಕ್ಷ್ಮಿ ಮಿತ್ತಲ್‌ ಮೂರನೇ ಸ್ಥಾನದಲ್ಲಿದ್ದಾರೆ. ಹಿಂದುಜಾ ಸೋದರರು, ಶಿವ ನಾಡಾರ್‌, ಗೊದ್ರೇಜ್‌ ಕುಟುಂಬ, ದಿಲೀಪ್‌ ಸಾಂಘ್ವಿ, ಕುಮಾರ ಬಿರ್ಲಾ ಮತ್ತು ಗೌತಮ್‌ ಅದಾನಿ ಸಿರಿವಂತರ ಪಟ್ಟಿಯ ಮುಂಚೂಣಿ 10ರಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

Edited By

Manjula M

Reported By

Manjula M

Comments