ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ಇನ್ನಿಲ್ಲ

05 Oct 2018 9:34 AM | General
594 Report

  ಬಿಬಿಎಂಪಿಯ ಉಪ ಮೇಯರ್ ಆಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ರಮೀಳಾ ಉಮಾಶಂಕರ್ ( 44 ವರ್ಷ ) ಹೃದಯಾಘಾತದಿಂದ ಗುರುವಾರ ಸುಮಾರು ರಾತ್ರಿ 12 ಗಂಟೆಯ ವೇಳೆಗೆ  ನಿಧನ ಹೊಂದಿದ್ದಾರೆ.

ರಾತ್ರಿ 12 ಗಂಟೆಯ ಸುಮಾರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ಕೂಡಲೇ ರಮೀಳಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಕಾವೇರಿಪುರಂ ವಾರ್ಡ್ ನಿಂದ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕಳೆದ ವಾರವಷ್ಟೆ ನಡೆದಿದ್ದ ಬಿಬಿಎಂಪಿ ಮೇಯರ್ ಉಪಮೇಯರ್ ಚುಣಾವಣೆಯಲ್ಲಿ ಉಪಮೇಯರ್ ಆಗಿ ಆಯ್ಕೆಯಾಗಿದ್ದರು.  ರಮೀಳಾ ಉಮಾಶಂಕರ್ ನಿಧನಕ್ಕೆ ರಾಜಕೀಯ ನಾಯಕರು, ಗಣ್ಯ ವಕ್ತಿಗಳು ಸಂತಾಪವನ್ನು ಸೂಚಿಸಿದ್ದಾರೆ.

Edited By

Manjula M

Reported By

Manjula M

Comments