ಮಕ್ಕಳಿಗೆ ಊಟ ಮಾಡಿಸುವುದು ಹೇಗೆ..? ಇಲ್ಲಿವೆ ಸಿಂಪಲ್ ಟಿಪ್ಸ್

04 Oct 2018 1:03 PM | General
618 Report

ಮನೆಯಲ್ಲಿ ಮಕ್ಕಳಿದ್ದರೆ ಏನೋ ಒಂಥರಾ ಖುಷಿ.. ಆದರೆ ಆ ಮಕ್ಕಳಿಗೆ ಊಟ ಮಾಡಿಸುವುದೇ ಒಂದು ದೊಡ್ಡ ತಲೆ ನೋವು.. ನನ್ನ ಮಗು ಸರಿಯಾಗಿ ಊಟ ಮಾಡುತ್ತಿಲ್ಲ ಅಂತ ಅಕ್ಕ ಪಕ್ಕದವರಿಗೆ ಹೇಳೋದರಲ್ಲೆ ಸಮಯ ವ್ಯರ್ಥ ಆಗುತ್ತದೆ.ಮಕ್ಕಳು ಊಟ ಮಾಡಲು ಸಿಕ್ಕಾಪಟ್ಟೆ ಹಠ ಮಾಡುತ್ತವೆ.  ಊಟ ಮಾಡಿಸಲು ಪೋಷಕರು ಹರ ಸಾಹಸವೇ ಪಡಬೇಕಾಗುತ್ತದೆ.  

ಮಕ್ಕಳಿಗೆ ಊಟ ಮಾಡಿಸಲು ಒಂದಿಷ್ಟು ಟಿಪ್ಸ್ ಅನುಸರಿಸಿ.. ಏನಪ್ಪಾ ಆ ಟಿಪ್ಸ್ ಅಂತೀರಾ..

  • ಮಕ್ಕಳಿಗೆ ಕುರುಕಲು ತಿಂಡಿಯ ಅಭ್ಯಾಸ ಮಾಡಿಸಬೇಡಿ. ಆದಷ್ಟು ಆರೋಗ್ಯಕರ ತಿನಿಸುಗಳನ್ನೆ ಮಾಡಿಕೊಡಿ.
  • ಮಕ್ಕಳಿಗೆ ಊಟ ಇಷ್ಟವಾಗುವ ರೀತಿ ಗಾರ್ನಿಷಿಂಗ್ ಮಾಡಿಕೊಡಿ. ಆಗ ಮಕ್ಕಳು ಊಡವನ್ನು ಇಷ್ಟ ಪಡುತ್ತವೆ.
  • ಪ್ರತಿದಿನ ಪ್ರೂಟ್ ಜ್ಯೂಸ್ ಗಳನ್ನು ಮಾಡಿಕೊಡಿ.. ಅದು ಕೂಡ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
  • ಬಲವಂತವಾಗಿ ಮಕ್ಕಳಿಗೆ ಏನನ್ನು ತಿನ್ನಿಸಬೇಡಿ.. ಅವರು ಏನು ಇಷ್ಟ ಪಡುತ್ತಾರೋ ಅವರಿಗೆ ಅದನ್ನೆ ಕೊಡಿ.ಹಾಗೆ ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸುವುದನ್ನು ಅಭ್ಯಾಸ ಮಾಡಿಸಿ.
  • ಸಾಮಾನ್ಯವಾಗಿ ಮಕ್ಕಲು ವಿಭಿನ್ನ ಹಾಗೂ ವಿನೂತನ ಆಹಾರಗಳನ್ನು ತಿನ್ನಲು ಇಷ್ಟಪಡುತ್ತಾರೆ. ಹಾಗಾಗಿ ಅವರಿಗೆ ಏನು ಇಷ್ಟವೋ ಅದನ್ನೆ ಮಾಡಿಕೊಡಿ..

ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳು ಊಟದ ಕಡೆ ಗಮನಕೊಡುತ್ತಾರೆ. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ

Edited By

Manjula M

Reported By

Manjula M

Comments