ರೈತರ ಪರವಾಗಿ ನಿಂತ ಎಚ್ ಡಿ ರೇವಣ್ಣ ಹೇಳಿದ್ದೇನು..?

02 Oct 2018 3:29 PM | General
1612 Report

ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ರೈತರ ಸಾಲ ಮನ್ನಾ ಮಾಡುವ ವಿಚಾರದ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ನೋಟಿಸ್ ನೀಡಿರುವ ಘಟನೆಗಳು ನಡೆದಿವೆ. ಈಬಗ್ಗೆ ಬ್ಯಾಂಕ್​ ನೋಟಿಸ್​ ನೀಡಿದ್ರೆ ಡಬ್ಬಕ್ಕೆ ಎಸೆಯಿರಿ ಅಂತ ಸಚಿವ ಎಚ್​.ಡಿ.ರೇವಣ್ಣ ರೈತರಿಗೆ ಕರೆ ನೀಡಿದ್ದಾರೆ. ಅವರು ಇಂದು ಹಾಸನದಲ್ಲಿ ನಡೆದ ಗಾಂಧಿ ಜಯಂತಿ ಕಾರ‍್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ಇದೇ ವೇಳೆ ಅವರು ಸಾಲಮನ್ನಾ ಆದೇಶ ನೀಡಿದ್ದರೂ ಬ್ಯಾಂಕ್​ಗಳಿಂದ ರೈತರಿಗೆ ನೋಟಿಸ್​ ನೀಡುತ್ತಿರುವ ವಿಚಾರ ಮಾತನಾಡಿ ನೋಟಿಸ್​ ನೀಡದಂತೆ ಬ್ಯಾಂಕ್​ ಅಧಿಕಾರಿಗಳ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಇನ್ನು ಕುಮಾರಸ್ವಾಮಿ ಅವರು ನೋಟಿಸ್​ ನೀಡದಂತೆ ಹೇಳಿದ್ದರೂ ಮತ್ತೆ ಅದೇ ಕೆಲಸ ಮಾಡಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ. ನೋಟಿಸ್​​ ನೀಡಿದ ಅಧಿಕಾರಿಯನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ಈ ಸಂದರ್ಭದಲ್ಲಿ ನೀಡಿದರು.

Edited By

Manjula M

Reported By

Manjula M

Comments