ಕತ್ತೆಗಳಿಗೆ ಪಾದಪೂಜೆ ಮಾಡಿ ವಿನೂತನವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಾಟಾಳ್ ನಾಗರಾಜ್

29 Sep 2018 2:42 PM | General
261 Report

ಡಿಫರೆಂಟ್ ಆಗಿ ಚಳುವಳಿ ಮಾಡುವುದಕ್ಕೆ ಹೆಸರಾದ ವಾಟಾಳ್ ನಾಗರಾಜ್ ಅವರು ತಮ್ಮಹುಟ್ಟುಹಬ್ಬವನ್ನು ಕೂಡ ವಿನೂತನವಾಗಿ ಮಾಡಿಕೊಂಡಿದ್ದಾರೆ. ಕನ್ನಡಕ್ಕಾಗಿ ಹೋರಾಟ ಮಾಡಿದ ವಾಟಾಳ್ ಅವರನ್ನು ಕಳೆದ ಐದು ದಶಕಗಳ ಹಿಂದೆ ಪೊಲೀಸರು ಬಂಧಿಸಿ ಬೂಟಿನ ಏಟು ನೀಡಿದ ದಿನವನ್ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ನಾಡಿನ ನ್ಯಾಯಕ್ಕಾಗಿ ನೆಲ, ಜಲ, ಸಂಸ್ಕೃತಿಗಾಗಿ ನಿರಂತರ ಹೋರಾಟ ಮಾಡುತ್ತ ಬಂದಿರುವ ವಾಟಾಳ್ ಎಲ್ಲವನ್ನೂ ವಿನೂತನವಾಗಿ ಮಾಡುವ ಅವರು ಮುಗ್ಧ ಪ್ರಾಣಿಗಳಾದ ಕತ್ತೆಗಳಿಗೆ ಪಾದಪೂಜೆ ನೆರವೇರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಾಟಾಳ್ ನಾಗರಾಜ್ ಅವರ ಅಭಿಮಾನಿಗಳು, ಗೆಳೆಯರು, ಕನ್ನಡಪರ ಹೋರಾಟಗಾರರು ಈ ಹುಟ್ಟು ಹಬ್ಬದ ಸಂದರ್ಭದಲ್ಲಿ ಭಾಗವಹಿಸಿದ್ದರು. ನಾಡ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲಾ ತಂಡಗಳು ಪ್ರದರ್ಶನ ನಡೆಸಿದವು. ಒಟ್ಟಾರೆಯಾಗಿ ವಿನೂತನ ಚಳುವಳಿಯಲ್ಲಿ ಹೆಸರುವಾಸಿಯಾಗಿರುವ ವಾಟಾಳ್ ನಾಗರಾಜ್ ಅವರು ವಿನೂತನವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

Edited By

Manjula M

Reported By

Manjula M

Comments