ಪ್ರಪಂಚದ ಈ ದುಬಾರಿ ಶೂಸ್ ಬೆಲೆ ಕೇಳಿದರೆ ಬೆಚ್ಚಿ ಬೀಳ್ತಿರಾ..!?

28 Sep 2018 2:06 PM | General
844 Report

ಯಾವಾಗಲೂ ಬ್ರಾಂಡೆಡ್ ವಸ್ತುನೇ ತಗೋಬೇಕು… ತುಂಬಾ ಕಾಸ್ಟ್ಲಿಯಾಗಿರೋ ವಸ್ತು ನೇ ತಗೋಬೇಕು ಅಂತ ಆಸೆ ಪಡೋರಿಗೆ ಒಂದೊಳ್ಳೆ ಅವಕಾಶವಿದೆ ನೋಡಿ. ಬೆಲೆಬಾಳುವ ವಸ್ತುಗಳನ್ನು ತಯಾರಿಸುವಲ್ಲಿ , ಕೊಳ್ಳುವಲ್ಲಿ ದುಬೈ ಯಾವಾಗಲೂ ಮುಂದೆ ಇರುತ್ತದೆ ಅನ್ನೋದು ಗೊತ್ತು… ಈಗ ಕಂಪನಿಯೊಂದು ಪ್ರಪಂಚದ ಅತಿ ಹೆಚ್ಚು ಬೆಲೆ ಬಾಳುವ ಶೂಸ್ ತಯಾರಿಸಿದೆ. ಆ ಶೂಸ್ ಬೆಲೆ ಕೇಳಿದರೆ ನಿಮ್ಮ ತಲೆ ಗಿರ ಗಿರ ತಿರುಗುತ್ತೆ.

ಆ ಶೂಸ್ ನ ಬೆಲೆ ಬರೋಬ್ಬರಿ 123 ಕೋಟಿ ರೂ..! ಇದೀಗ ಸದ್ಯ ದುಬೈನ ಬುರ್ಜ್ ಅಲ್ ಅರಬ್ ಹೋಟೆಲ್ ನಲ್ಲಿ ಈ ಶೂಗಳನ್ನು ಮಾರಾಟಕ್ಕಿಡಲಾಗಿದೆ.ದುಬೈನ ಪ್ರಖ್ಯಾತ ಚಪ್ಪಲ್ ಕಂಪೆನಿಯಾದ ಜಾದ ದುಬೈ ಈ ಪ್ರಪಂಚದಲ್ಲೇ ಅತಿ ಹೆಚ್ಚು ಬೆಲೆಬಾಳುವ  ಶೂಗಳನ್ನು ತಯಾರು ಮಾಡಿದೆ. ಈ ಶೂಗಳನ್ನು ಚಿನ್ನ ಮತ್ತು ವಜ್ರಗಳಿಂದ ತಯಾರಿಸಲಾಗಿದ್ದು, ಇದರಲ್ಲಿ 15 ಕ್ಯಾರಟ್ ನ ಒಟ್ಟು 236 ವಜ್ರಗಳಿವೆ. ಈ ಬೆಲೆಬಾಳುವ ಶೂಗಳನ್ನು ವಿನ್ಯಾಸಗೊಳಿಸಲು ಮತ್ತು ತಯಾರಿಸಲು ಈ ಕಂಪನಿ 9 ತಿಂಗಳು ಸಮಯವನ್ನು ತೆಗೆದುಕೊಂಡಿದೆ.

Edited By

Manjula M

Reported By

Manjula M

Comments