ಬೆಂಗಳೂರಿನ ಈ ಹುಡುಗಿಯ ಸಾಧನೆ ಕೇಳಿದ್ರೆ ಶಾಕ್ ಆಗ್ತಿರಾ.!

28 Sep 2018 11:27 AM | General
193 Report

ಮಕ್ಕಳು ಚೆನ್ನಾಗಿ ಓದಬೇಕು ಅನ್ನೋದು ಪೋಷಕರ ಆಸೆ.. ಅದೇ ರೀತಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ 15 ರ ವಯಸ್ಸಿನ ಈ ಬಾಲಕಿ ತನ್ನ  ವಯಸ್ಸಿಗೂ ಮೀರಿದ ಸಾಧನೆಯನ್ನು ಮಾಡಿದ್ದಾಳೆ. ನಾಸಾ ಸಂಸ್ಥೆ ಆಯೋಜಿಸುವ ನಾಸಾ ಏಮ್ಸ್ ಸ್ಪೇಸ್ ಸೆಟಲ್ಮೆಂಟ್ ಕಂಟೆಸ್ಟ್ ನಲ್ಲಿ ಈ 15 ರ ಪೋರಿ ವಿಜೇತಳಾಗಿದ್ದಾಳೆ.

ಈ ಹಿಂದೆ ನಡೆದ ಇದೇ ಸ್ಪರ್ಧೆಯಲ್ಲಿ ಈಕೆ ಎರಡು ಬಾರಿ ವಿಜೇತಳಾಗಿದ್ದು, ಈ ಮೂಲಕ ಸತತ ಮೂರು ಬಾರಿ ಗೆಲುವು ಈ ಪೋರಿ ಸಾಧಿಸಿದ್ದಾಳೆ. ಅಂದ ಹಾಗೆ ಈಕೆ ಬೆಂಗಳೂರಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಈ  ವಿದ್ಯಾರ್ಥಿನಿಯ ಹೆಸರು ನಿಧಿ ಮಯೂರಿಕಾ. ನಾನು ಐದನೇ ಕ್ಲಾಸಿನಲ್ಲಿದ್ದಾಗ ಯಾವಾಗಲೂ ಶಾಲೆಯಲ್ಲಿ ನಡೆಯುತ್ತಿದ್ದ ಸೈನ್ಸ್ ಕಾಂಪಿಟಿಷನ್‍ನಲ್ಲಿ ಭಾಗವಹಿಸುತ್ತಿದ್ದೆ. ವಿಜ್ಞಾನದ ಮೇಲಿನ ನನ್ನ ಅಸಕ್ತಿ ನೋಡಿ ಶಾಲಾ ಮುಖ್ಯಸ್ಥರು ನನಗೆ ನಾಸಾದ ಸ್ಪರ್ಧೆ ಬಗ್ಗೆ ತಿಳಿಸಿದರು. ಹೀಗಾಗಿ ನಾನು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲ್ಲಲು ಸಾಧ್ಯವಾಯಿತು ಎಂದು ನಿಧಿ ತಿಳಿಸಿದ್ದಾರೆ.

Edited By

Manjula M

Reported By

Manjula M

Comments