ದಸರಾ ರಜೆಯಲ್ಲಿ ಕಡಿತವಿಲ್ಲ ಎಂದು ಸ್ಪಷ್ಟ ಪಡಿಸಿದ ಸಚಿವ ಖಾದರ್

27 Sep 2018 6:00 PM | General
233 Report

ಪ್ರಸಕ್ತ ಸಾಲಿನ ದಸರಾ ರಜೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಯಾವುದೇ ಕಡಿತವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಸಿಇಒ, ಡಿಡಿಪಿಐ ಜತೆ ಚರ್ಚೆ ನಡೆಸಿ ತೀರ್ಮಾನ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.  

ಇಂದು ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿ ಇದೇ ಮಳೆ ಮತ್ತಿತರ ಕಾರಣಗಳಿಂದ ಹೆಚ್ಚು ರಜೆ ಮಾಡಿದ್ದರೆ, ಅದನ್ನು ಹೇಗಾದರೂ ಮಾಡಿ ಸರಿದೂಗಿಸಲಿ. ವರ್ಷಕ್ಕೊಮ್ಮೆ ಬರುವ ದಸರಾ ರಜೆಗೆ ಹೆಚ್ಚಿನ ಪೋಷಕರು ವಿವಿಧ ಕಾರ್ಯಕ್ರಮ ರೂಪಿಸಿಕೊಂಡಿರುತ್ತಾರೆ. ಆದ್ದರಿಂದ ಹಿಂದಿನ ಮಾದರಿಯಲ್ಲೇ ಅ.7-21ರ ತನಕ ರಜೆ ಇರಲಿದೆ. ಅದರಲ್ಲಿ ಯಾವುದೇ ಕಡಿತ ಮಾಡುವುದಿಲ್ಲ  ಎಂದು ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಸ್ಪಷ್ಟಪಡಿಸಿದರು.

Edited By

Manjula M

Reported By

Manjula M

Comments