ರಾಜಸ್ಥಾನದ  ಈ ಹಳ್ಳಿಯಲ್ಲಿ ಹುಡುಗರಿಗೆ ಬಂಪರ್ ಆಫರ್..! ಏನಂತಿರಾ.. ನೀವೆ ಓದಿ

26 Sep 2018 3:32 PM | General
350 Report

ಸಾಮಾನ್ಯವಾಗಿ ನಮಲ್ಲಿ ಎರಡು ಮದುವೆ ಆದರೆ ಏನ್ ಮಾಡ್ತಾರೆ ಹೇಳಿ.. ದಿನ ಜಗಳ, ಅದು ಇದು ಅಂತಾ ಕಿತ್ತಾಡುತ್ತಲೆ ಇರುತ್ತಾರೆ.  ಆದರೆ ನಾವ್ ಹೇಳೋ ಈ ಹಳ್ಳಿಯಲ್ಲಿ ಒಂದು ಹುಡುಗನಿಗೆ ಎರಡು ಮದುವೆ ಅಂತೆ… ಆಶ್ಚರ್ಯ ಆದ್ರೂ ನಿಜ.. ಮುಂದೆ ಓದಿ..  ಒಂದೊಂದು ದೇಶದಲ್ಲಿ ಒಂದೊಂದು ಆಚಾರ ವಿಚಾರಗಳು ಇರುತ್ತವೆ. ಆ ಆಚಾರಗಳು ಒಬ್ಬರಿಗೆ ಇಷ್ಟವಾಗುತ್ತದೆ ಇನ್ನೊಬ್ಬರಿಗೆ ಇಷ್ಟವಾಗುವುದಿಲ್ಲ, ಆದರೆ ಕೆಲವೊಂದು ವಿಚಾರಗಳು ಆಚಾರಗಳು ಕೆಲವರಿಗೆ ಹೆಚ್ಚಾಗಿ ಇಷ್ಟವಾಗುತ್ತದೆ. ಇಷ್ಟವಾಗುವ ಆಚಾರಗಳನ್ನು ಜನರು ಇಷ್ಟಪಟ್ಟು ಚೆನ್ನಾಗಿ ಪಾಲಿಸುತ್ತಾರೆ. ಈಗ ಅಂತಹುದೆ ಒಂದು ವಿಶೇಷವಾದ ಆಚಾರವನ್ನು ನಾವು ನಿಮಗೆ ತಿಳಿಸುತ್ತೇವೆ..

ರಾಜಸ್ಥಾನದಲ್ಲಿ ಒಂದು ವಿಚಿತ್ರವಾದ ಆಚಾರಣೆಯೊಂದು ಇದೆ, ಅದು ಏನು ಗೊತ್ತ ಇಲ್ಲಿ ಎರಡು ಮದುವೆ ಆಗುವುದು ಕಡ್ಡಾಯವಂತೆ, ಅರೇ ಇದೇನಿದು ಎರಡು ಮದುವೆ ಆಗೋದದು ಕಡ್ಡಾಯನಾ ಅಂತ ನಿಮಗೆ ಆಶ್ಚರ್ಯ ಆಗಬಹುದು ಆದರೆ ಇದು ನಿಜ.ರಾಜಸ್ಥಾನ್ ರಾಜ್ಯದ ಬರ್ಮೆಲ್ ಜಿಲ್ಲೆಯ ದೇರಸರ್ ಗ್ರಾಮದಲ್ಲಿ ಇಂತಹ ಒಂದು ವಿಚಿತ್ರ ಆಚಾರಣೆ ಜಾರಿಯಲ್ಲಿದೆ. ಈ ಗ್ರಾಮದ ಪ್ರತಿಯೊಬ್ಬ ಹುಡುಗ ಕೂಡ ಎರಡು ಮದುವೆ ಆಗಲೆಬೇಕು ಎಂಬ ಪ್ರತೀತಿ ಇದೆ, ಮತ್ತು ಇಲ್ಲಿನ ಜನರು ಈ ಆಚಾರವನ್ನು ಪಾಲಿಸುತ್ತಿದ್ದು, ಈ ಆಚಾರದಲ್ಲಿ ಬಹಳ ನಂಬಿಕೆ ಇಟ್ಟಿದ್ದಾರೆ. ದೇರಸರ್ ಗ್ರಾಮ 700 ಜನರಿರುವ ಗ್ರಾಮ, ಈ ಗ್ರಾಮದಲ್ಲಿ ಒಂದು ಮದುವೆ ಆದರೆ ಮಕ್ಕಳಾಗುವುದಿಲ್ಲವಂತೆ, ಅದೆ ಎರಡು ಮದುವೆ ಆದ್ರೆ ಮಾತ್ರ ಇಲ್ಲಿ ಮಕ್ಕಳಾಗುವುದಂತೆ. ಈ ವಿಚಾರವಾಗಿ ಕೆಲವು ಈ ನಂಬಿಕೆಯನ್ನು ಪರೀಕ್ಷಿಸಿ ಕೂಡ ನೋಡಿದ್ದಾರಂತೆ ಆದ್ರೆ ಒಂದು ಮದುವೆ ಆದವರಿಗೆ ಮಕ್ಕಳೆ ಆಗಲಿಲ್ಲವಂತೆ , ಕೊನೆಗೆ ಎರಡನೆ ಮದುವೆ ಆದ ಮೇಲೆ ಅವರಿಗೆ ಮಕ್ಕಳಾಗಿದೆಯಂತೆ. ಈ ಕಾರಣಕ್ಕಾಗಿ ಇಲ್ಲಿ ಎರಡು ಮದುವೆ ಆಗುವುದು ಕಡ್ಡಾಯವಾಗಿದೆ, ಮತ್ತು ಈ ನಂಬಿಕೆಯನ್ನು ಇಲ್ಲಿನ ಜನರು ಪಾಲಿಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಈ ಗ್ರಾಮದ ಜನರು ಎರಡು ಮದುವೆ ಆಚರಣೆಯನ್ನು ಇಂದಿಗೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ. ಇನೂ ಹೇಳಬೇಕು ಎಂದರೆ ಸಿಕ್ಕಿದ್ದೇ ಚಾನ್ಸ್ ಎಂಬಂತೆ ಈ ಆಚಾರವನ್ನು ಹುಡಗರು ಸಖತ್ ಆಗಿ ನಂಬಿಕೆ ಇಟ್ಟು ಶ್ರದ್ಧೆಯಿಂದ ಎರಡು ಮದುವೆ ಆಗಿ ಜಾಲಿ ಮಾಡುತ್ತಿದ್ದಾರೆ. ಹುಡಗರಿಗೆ ಚಾನ್ಸ್ ಅಂದ್ರೆ ಇದು ಇನ್ನು ಈ ಆಚಾರಣೆಯಲ್ಲಿ ಯಾವುದೆ ಜಗಳ ಆಡುವಂತಿಲ್ಲ. ಇಬ್ಬರು ಹೆಂಡತಿಯರು ಒಂದೆ ಮನೆಯಲ್ಲಿ ಇರಬೇಕು, ರಾತ್ರಿ ಗಂಡ ತನಗೆ ಇಷ್ಟವಾದ ಹೆಂಡತಿಯೊಂದಿಗೆ ಮಲಗಬಹುದು ಇದರಲ್ಲಿ ಯಾರು ಗಲಾಟೆ ಮಾಡಿ ಜಗಳ ಆಡುವಂತಿಲ್ಲ. ಇನ್ನೂ ಈ ಆಚಾರ ಅಕ್ಕ ಪಕ್ಕದ ಹಳ್ಳಿಹಳ್ಳಿಗೂ ವ್ಯಾಪಿಸುತ್ತಿದೆಯಂತೆ

Edited By

Manjula M

Reported By

Manjula M

Comments