ಜ್ವರ ಬಂದ ಹುಡುಗಿಗೆ ಗರ್ಭಿಣಿ ಅಂತ ಹೇಳಿದ ವೈದ್ಯ..!?ಆಮೇಲೆ ಏನಾಯ್ತು..?

25 Sep 2018 6:09 PM | General
666 Report

ಜ್ವರ ಅಂತ ಹೇಳಿ ಆಸ್ಪತ್ರೆಗೆ ಹೋದರೆ ಡಾಕ್ಟರ್ ಹೀಗಾ ಮಾಡೋದು..ಜ್ವರ ಬಂದ ಬಾಲಕಿಗೆ ಗರ್ಭಿಣಿ ಅಂತ ಹೇಳಿರುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

ಈ ಸಂಬಂಧವಾಗಿ ಬಾಲಕಿಯ ಪೋಷಕರು ಸರಿಯಾಗಿ ಪರೀಕ್ಷೆ ಮಾಡಿ ಅಂತ ಹೇಳಿದರೆ ವೈದ್ಯ ಪೋಷಕರಿಗೆ ಅವಾಜ್ ಹಾಕಿರುವ ಘಟನೆ ನಡೆದಿದೆ. ಇಕ್ಬಾಲ್ ಅಹಮದ್ ಎಂಬುವರು ತಮ್ಮ ಮೊಮ್ಮಗಳಿಗೆ ತೀವ್ರ ಜ್ವರ ಎಂದು ಖಾಸಗಿ ಆಸ್ಪತ್ರೆಗೆ ತೋರಿಸಿದ್ದರು. ಆಗ ಅಲ್ಲಿನ ವೈದ್ಯರು ಬಾಲಕಿಗೆ ಡೆಂಗ್ಯೂ ಎಂದು ತಿಳಿಸಿದ್ದರು ಎನ್ನಲಾಗಿದೆ. ಹಾಗಾಗಿ ಇಕ್ಬಾಲ್​​ ತಕ್ಷಣ ತಮ್ಮ ಮೊಮ್ಮಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಬಂದ ವೇಳೆಯಲ್ಲಿ ವೈದ್ಯರಾದ ಸೈಯದ್​ ಮೀರ್​ ಅಹಮದ್​​ ಖಾಸಗಿ ಆಸ್ಪತ್ರೆ ವೈದ್ಯರ ವರದಿಯನ್ನು ನೋಡದೇಯೇ, ಬಾಲಕಿಯ ಕೈ ಹಿಡಿದು ಆಕೆ ಗರ್ಭಿಣಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ವೈದ್ಯರ ನಡವಳಿಕೆ ವಿರುದ್ದ ಬಾಲಕಿ ಪೋಷಕರು ಆಸ್ಪತ್ರೆಯ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ ಅಂತ ತಿಳಿದು ಬಂದಿದೆ. ಈ ವಿಷಯವಾಗಿ ತನಿಖೆಯನ್ನು ನಡೆಸಲಾಗುತ್ತಿದೆ.

Edited By

Manjula M

Reported By

Manjula M

Comments